ಕೆಲಸ ಕೊಡಿಸುವುದಾಗಿ ನಂಬಿಸಿ ಅತ್ಯಾಚಾರ ಆರೋಪ: ಟಿ-ಸಿರಿಸ್ ಮುಖ್ಯಸ್ಥ ಭೂಷಣ್ ಕುಮಾರ್ ವಿರುದ್ಧ ರೇಪ್ ಕೇಸ್

Prasthutha|

ಮುಂಬೈ: ಟಿ-ಸಿರಿಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಖ್ಯಾತ ಗಾಯಕ ಗುಲ್ಷನ್ ಕುಮಾರ್ ಅವರ ಪುತ್ರ ಭೂಷಣ್ ಕುಮಾರ್ ಪ್ರಸ್ತುತ ಟಿ-ಸಿರಿಸ್ ಸಂಸ್ಥೆಯ ವ್ಯವಸ್ಥಾಪಕರಾಗಿದ್ದಾರೆ.

- Advertisement -

ಅವರ ವಿರುದ್ಧ 30 ವರ್ಷದ ಮಹಿಳೆಯೊಬ್ಬರು ದೂರು ನೀಡಿದ್ದು, ಅಂಧೇರಿಯ ಪಶ್ಚಿಮ ವಿಭಾಗದ ಡಿ.ಎನ್.ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376, 420 ಮತ್ತು 506 ಅಡಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

ಟಿ-ಸಿರಿಸ್ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ನನ್ನನ್ನು ನಂಬಿಸಿದ್ದ ಭೂಷಣ್ ಕುಮಾರ್ ಅತ್ಯಾಚಾರ ನಡೆಸಿದ್ದಾರೆ ಎಂದು ಮಹಿಳೆ ಲಿಖಿತ ದೂರು ನೀಡಿದ್ದಾರೆ. ಖ್ಯಾತ ಗಾಯಕರಾಗಿದ್ದ ಗುಲ್ಷನ್ ಕುಮಾರ್ ಟಿ-ಸಿರಿಸ್ ಸಂಸ್ಥೆ ಹುಟ್ಟು ಹಾಕಿದ್ದರು. ಅದು ಈಗ ಭಾರತದಲ್ಲಿ ಕ್ಯಾಸೆಟ್ ಕಿಂಗ್ ಎಂದು ಗುರುತಿಸಿಕೊಂಡಿದೆ. ಹಲವಾರು ಚಿತ್ರಗಳನ್ನು ನಿರ್ಮಿಸಿದೆ. 1997ರಲ್ಲಿ ಗುಲ್ಷನ್ ಕುಮಾರ್ ಅವರನ್ನು ಅಂದೇರಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಬಳಿಕ ಟಿ-ಸಿರಿಸ್ ಗೆ ಅವರ ಪುತ್ರ ಭೂಷಣ್ ಕುಮಾರ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.



Join Whatsapp