ಮುಂಬೈ: ತನ್ನ ನಗ್ನ ಚಿತ್ರಗಳನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಕ್ಕಾಗಿ ರಣವೀರ್ ಸಿಂಗ್ ವಿರುದ್ಧ ದಾಖಲಾಗಿರುವ ದೂರಿಗೆ ಸಂಬಂಧಿಸಿದಂತೆ ಅಗಸ್ಟ್ 22 ರಂದು ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ಸಮನ್ಸ್ ನೀಡಿದ್ದಾರೆ
ನಟನಿಗೆ ಆಗಸ್ಟ್ 22 ರಂದು ಚೆಂಬೂರ್ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ಆದೇಶಿಸಲಾಗಿದೆ.
ಕಳೆದ ತಿಂಗಳು ನಟ ರಣವೀರ್ ,ಪೇಪರ್ ಮ್ಯಾಗಜೀನ್ ಫೋಟೋ ಶೂಟ್ ಗಾಗಿ ತೆಗೆಸಿಕೊಂಡ ತನ್ನ ಬೆತ್ತಲೆ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ರಣವೀರ್ ವಿರುದ್ಧ ಸ್ಥಳೀಯ ಸರ್ಕಾರೇತರ ಸಂಸ್ಥೆ ದೂರು ನೀಡಿದ ನಂತರ ಪ್ರಕರಣವನ್ನು ದಾಖಲಾಗಿತ್ತು.
ಪ್ರಕರಣದಲ್ಲಿ ರಣವೀರ್ ಮಹಿಳೆಯರ ಭಾವನೆಗಳನ್ನು ಘಾಸಿ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು.