ಸಲಫಿ ಮದ್ರಸಗಳ 7ನೇ ತರಗತಿ ಪಬ್ಲಿಕ್ ಪರೀಕ್ಷೆ ಫಲಿತಾಂಶ ಪ್ರಕಟ

Prasthutha|

ಮಂಗಳೂರು: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಮಂಗಳೂರು ಇದರ ಅಧೀನ ಸಂಸ್ಥೆ ಸಲಫಿ ಎಜುಕೇಶನ್ ಬೋರ್ಡ್(S.E.B) ವತಿಯಿಂದ 2022-23ನೇ ಸಾಲಿನ ಮೇ ತಿಂಗಳಲ್ಲಿ ನಡೆಸಲಾದ 7ನೇ ತರಗತಿಯ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ.

- Advertisement -

ಮದ್ರಸತುಲ್ ಇಸ್ಲಾಮಿಯಾ ಕಣ್ಣೂರು ಇದರ ವಿದ್ಯಾರ್ಥಿನಿ, ಜನಾಬ್ ಕೆ.ಎಸ್. ಅಬ್ದುಲ್ ಖಾದರ್ ಮತ್ತು ಆಯಿಶಾ ದಂಪತಿಯ ಪುತ್ರಿ ಮರ್ಯಮ್ ಅರ್ಶಿಯಾ ಪ್ರಥಮ ರ‍್ಯಾಂಕ್ ಪಡೆದಿರುತ್ತಾರೆ.

ಚೊಕ್ಕಬೆಟ್ಟು ಸಿರಾತೇ ಮುಸ್ತಖೀಮ್ ಮದ್ರಸದ ವಿದ್ಯಾರ್ಥಿನಿ, ಜನಾಬ್ ಮುಹಮ್ಮದ್ ಅಶ್ರಫ್ ಮತ್ತು ಫಝೀನಾ ದಂಪತಿಯ ಪುತ್ರಿ ಫುಆದಾ ಆಶ್ಫಾ ದ್ವಿತೀಯ ಮತ್ತು ಅದೇ ಮದ್ರಸದ ವಿದ್ಯಾರ್ಥಿನಿ ಅಬ್ದುಲ್ ಮಜೀದ್ ಮತ್ತು ರಹ್ಮತುನ್ನಿಸಾ ದಂಪತಿಯ ಪುತ್ರಿ ರಿದಾ ಮರ್ಯಮ್ ತೃತೀಯ ರ‍್ಯಾಂಕ್ ಪಡೆದಿರುತ್ತಾರೆಂದು ಸಲಫಿ ಎಜುಕೇಶನ್ ಬೋರ್ಡ್ ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

Join Whatsapp