ಬಿಜೆಪಿ ಸರ್ಕಾರದ ಅವಧಿಯಲ್ಲಿ ರೈತರು ಬದುಕುವುದೇ ದುಸ್ತರವಾಗಿದೆ: ರಣದೀಪ್ ಸಿಂಗ್ ಸುರ್ಜೇವಾಲ

Prasthutha|

ಬೆಂಗಳೂರು: ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘದ ಸದಸ್ಯರು ನಡೆಸುತ್ತಿದ್ದ ಪ್ರತಿಭಟನೆಯನ್ನು ಹತ್ತಿಕ್ಕಿದ ಪೊಲೀಸರ ಅಮಾನವೀಯ ನಡೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕಬ್ಬುದರ ನಿಗದಿ, ಹಾಲಿನ ಬೆಲೆ ಏರಿಕೆಗಾಗಿ 52 ದಿನಗಳಿಂದ ಧರಣಿ ನಡೆಸುತ್ತಿದ್ದ ರೈತರ ಮೇಲೆ ದಾಳಿ ನಡೆಸಿ ಪೆಂಡಾಲ್ ಕಿತ್ತೆಸೆದಿರುವುದು ಸರ್ಕಾರದ ಉದ್ಧಟತನದ ಪರಮಾವಧಿ. ಅಂಬೇಡ್ಕರ್,ಮಹಾತ್ಮಗಾಂಧಿ ಅವರಂಥ ರಾಷ್ಟ್ರನಾಯಕರುಗಳ ಭಾವಚಿತ್ರಕ್ಕೂ ಅಪಮಾನ ಎಸಗಲಾಗಿದೆ. ಈ ರೈತವಿರೋಧಿ ರಾಜ್ಯ ಬಿಜೆಪಿ ಸರ್ಕಾರದಲ್ಲಿ ರೈತರು ಬದುಕುವುದೇ ದುಸ್ತರವಾಗಿದೆ ಎಂದು ಟೀಕಿಸಿದರು.



Join Whatsapp