ಉಳ್ಳಾಲ: ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಪಕ್ಷದ ಹಳೆಕೋಟೆ ವಾರ್ಡ್ ಅಧ್ಯಕ್ಷರಾದ ರವೂಫ್ ಹಳೆಕೋಟೆಯವರ ನೇತೃತ್ವದಲ್ಲಿ ಅರ್ಹ ಬಡ ಕುಟುಂಬಗಳಿಗೆ ರಮಝಾನ್ ಪಡಿತರ ಕಿಟ್ ವಿತರಿಸಲಾಯಿತು.
ರವೂಫ್ ಹಳೆಕೋಟೆಯವರ ನೇತೃತ್ವದಲ್ಲಿ ಪ್ರತಿ ವರ್ಷವೂ ಫಾರೂಕ್ ಹಳೆಕೋಟೆಯವರ ಸಹಕಾರದೊಂದಿಗೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಪಡಿತರ ಕಿಟ್‌ಗಳನ್ನು ವಿತರಿಸಲಾಗುತ್ತಿದ್ದು, ಈ ವರ್ಷವೂ ಅರ್ಹ ಬಡ ಕುಟುಂಬಗಳಿಗೆ ರೇಷನ್ ಕಿಟ್ ವಿತರಿಸಲಾಯಿತು.
ಕಳೆದ ಹಲವಾರು ವರ್ಷಗಳಿಂದ ರಮಝಾನ್‌ನಲ್ಲಿ ಮತ್ತು ಕೋವಿಡ್ ಸಂಕಷ್ಟ ಕಾಲದಲ್ಲಿ ಲಾಕ್‌ಡೌನ್ ನಡುವೆಯೂ ಪಡಿತರ ಕಿಟ್ ಒದಗಿಸುವಲ್ಲಿ ಸಕ್ರಿಯವಾಗಿ ಶ್ರದ್ಧೆಯಿಂದ ತೊಡಗಿಸಿಕೊಂಡಿದ್ದ ಇವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.