ಬೆಂಗಳೂರಿನ ರಾಮ್ಸ್ ಸನ್ಸ್ ಸಂಸ್ಥೆಯಿಂದ ಹರ್ಜಗೋವಿಯಾದಲ್ಲಿ ನಾವೀನ್ಯತೆ ಕೇಂದ್ರ ತೆರೆಯಲು ತೀರ್ಮಾನ

Prasthutha|

ಬೆಂಗಳೂರು; ನಗರದಲ್ಲಿ ಕಳೆದ 60 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ರಾಮ್ ಸನ್ಸ್ ಸಂಸ್ಥೆ ಬೋಸ್ನಿಯಾದ ಹರ್ಜಗೋವಿಯಾದಲ್ಲಿ ನಾವೀನ್ಯತೆ ಕೇಂದ್ರವನ್ನು ತೆರೆಯಲು ನಿರ್ಧರಿಸಿದೆ ಎಂದು ರಾಮ್ಸನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಂದರ್ ಬೆಲಾನಿ ತಿಳಿಸಿದ್ದಾರೆ.

- Advertisement -


ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬೋಸ್ನಿಯಾ – ಹರ್ಜಗೋವಿಯಾದ ರಾಜಧಾನಿ ಸರಜೇವೋದಲ್ಲಿ ಇದೇ ಮೇ 11 ಮತ್ತು 12 ರಂದು ಸರಜೆವೋ ವ್ಯಾಪಾರ ಮೇಳ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ನಾವಿನ್ಯತಾ ಕೇಂದ್ರ ಮಹತ್ವ ಪಡೆದುಕೊಂಡಿದೆ ಎಂದು ಹೇಳಿದರು.


ರಾಮ್ಸನ್ ಸಂಸ್ಥೆಯ ಸಲಹೆಗಾರ ಮತ್ತು ಹೈದ್ರಬಾದ್ ನವಾಬ್ ನಜಾಪ್ ಅಲಿ ಖಾನ್ ಮಾತನಾಡಿ, ಈ ಉದ್ದೇಶದಿಂದ ಬೋಸ್ನಿಯಾ – ಹರ್ಜಗೋವಿಯಾದ ರಾಯಭಾರಿ ಮುಹಮದ್ ಸೆಂಜಿಕ್ ಅವರು ಬುಧವಾರ ಮತ್ತು ಗುರವಾರದಂದು ಬೆಂಗಳೂರಿಗೆ ಭೇಟಿ ನೀಡಿ, ಬೆಂಗಳೂರಿನ ವ್ಯಾಪಾರ ಸಮುದಾಯದವರೊಂದಿಗೆ ಉದ್ಯೋಗಾವಕಾಶಗಳ ಕುರಿತು ಸಮಾಲೋಚನೆ ನಡೆಸಿದರು.
ಆಗ್ನೇಯ ಯುರೋಪ್ ನಲ್ಲಿ ಈ ವ್ಯಾಪಾರ ಮೇಳ ಅತ್ಯಂತ ಮಹತ್ವ ಪಡೆದುಕೊಂಡಿದೆ. ರಾಮ್ಸನ್ಸ್ ಸಂಸ್ಥೆ ಬೆಂಗಳೂರಿನಲ್ಲಿ 10 ಕಡೆಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದ್ದು, 19 ದೇಶಗಳಲ್ಲಿ ತನ್ನ ಅಸ್ತಿತ್ವ ಹೊಂದಿದೆ ಎಂದು ಹೇಳಿದರು.




Join Whatsapp