ನಾಳೆ ಮತ್ತಿಬ್ಬರು ಸಚಿವರ ಸಿಡಿ ಬಿಡುಗಡೆ? । ಯತ್ನಾಳ್ ಹೇಳಿದ ‘TRP’ ಇದುವೇನಾ?!

Prasthutha: March 2, 2021

ಬಿಜೆಪಿ ಸರ್ಕಾರಕ್ಕೆ ಇಂದು ಬಿಡುಗಡೆಯಾದ ಸಚಿವ ರಮೇಶ್ ಜಾರಕಿಹೊಳಿಯವರ ರಾಸಲೀಲೆಯ ವೀಡಿಯೋ ನುಂಗಲಾರದ ತುತ್ತಾಗಿದೆ. ಸಚಿವರ ಕಾಮಪುರಾಣದ ಸಿಡಿಯು ಹೈಕಮಾಂಡಿಗೂ ತಲುಪಿದ್ದು ಸಚಿವರ ರಾಜೀನಾಮೆಗೆ ಆದೇಶ ಬಂದಿದೆ ಎನ್ನಲಾಗಿದೆ. ನಾಳೆ ರಾಜ್ಯ ಸಚಿವ ಸಂಪುಟ ಸಭೆಯಿತ್ತು. ಈ ಸಂಧರ್ಭದಲ್ಲಿ ಆಪ್ತನ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಕಂಗೆಟ್ಟಿದ್ದಾರೆ. ರಮೇಶ್ ಜಾರಕಿಹೊಳಿಯಿಂದಾನೇ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಮುಂದಿನ ತೀರ್ಮಾನ ನಿಜಕ್ಕೂ ಯಡಿಯೂರಪ್ಪರಿಗೆ ಕಷ್ಟಕರವಾಗಿದೆ.

ಏತನ್ಮಧ್ಯೆ ರಮೇಶ್ ಜಾರಕಿಹೊಳಿ ಹೊರತುಪಡಿಸಿ ಹಳೆ ಮೈಸೂರು ಭಾಗದ ಒಬ್ಬರು ಹಾಗೂ ಉತ್ತರ ಕರ್ನಾಟಕ ಭಾಗದ ಸಚಿವರ ಸಿಡಿ ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಶುರುವಾಗಿದೆ. ಅದು ಯಾರ ಸಿಡಿ ಎಂದು ಸಿಡಿ ಬಿಡುಗಡೆಯಾದ ನಂತರವಷ್ಟೇ ಗೊತ್ತಾಗಲಿದೆ.

ನಿನ್ನೆ ಮಾಧ್ಯಮದೊಂದಿಗೆ ಮಾತಾಡಿದ್ದ ಯತ್ನಾಳ್ ನಾಳೆ ಟಿವಿಯರಿಗೆ ಅದ್ಭುತ TRP ಕೊಡುತ್ತೇನೆ ಅಂದಿದ್ದರು. ಅಂತೆಯೇ ಇಂದು ಎಲ್ಲಾ ಮಾಧ್ಯಮಗಳಲ್ಲೂ ಸಚಿವರ ರಾಸಲೀಲೆಯ ವೀಡಿಯೋ ಎರ್ರಾಬಿರ್ರಿ ಹರಿದಾಡುತ್ತಿದೆ. ಯತ್ನಾಳ್ ಹೇಳಿದ ಟಿಆರ್ಪಿ ಇದೇನಾ ಎಂದು ಜನರಾಡಿಕೊಳ್ಳುತ್ತಿದ್ದಾರೆ

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!