ಬೆಂಗಳೂರು: ಬಿಜೆಪಿ ಸರ್ಕಾರ ಯಾವುದೇ ಅರ್ಹತೆಯಿಲ್ಲದ ರೋಹಿತ್ ಚಕ್ರತೀರ್ಥ ಎಂಬ ವ್ಯಕ್ತಿಗೆ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಜವಾಬ್ದಾರಿಯನ್ನು ನೀಡಿದೆ. ಈ ವ್ಯಕ್ತಿ ಆರೆಸ್ಸೆಸ್ ಹಿನ್ನೆಲೆಯನ್ನು ಹೊಂದಿದ್ದು, ಮಕ್ಕಳಲ್ಲಿ ಕೋಮುವಾದದ ವಿಷಬೀಜ ಬಿತ್ತುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಇತಿಹಾಸವನ್ನು ತಿರುಚಿ, ಸತ್ಯವಲ್ಲದ ಸಂಗತಿಗಳನ್ನು ಪಠ್ಯಪುಸ್ತಕದಲ್ಲಿ ಸೇರಿಸಲು ಪ್ರಯತ್ನಿಸುತ್ತಿದ್ದಾರೆ. ನಾಡಿನ ಮಹಾನ್ ವ್ಯಕ್ತಿಗಳ ಅಪಮಾನ ಮಾಡುವ ಕೆಲಸವನ್ನು ಈ ಸಮಿತಿ ಮಾಡಿದೆ. ಬುದ್ಧ ಬಸವಣ್ಣ ಮಹಾವೀರ ಜಯಂತಿ ಭಗತ್ ಸಿಂಗ್ ಅಂಬೇಡ್ಕರ್ ಅವರು ನಾರಾಯಣಗುರುಗಳುp ಹಾಗೂ ಕುವೆಂಪು ಸೇರಿದಂತೆ ಹಲವು ಮಹಾನ್ ವ್ಯಕ್ತಿಗಳ ಪಠ್ಯವನ್ನು ತಿರುಚಿ ಅಪಮಾನ ಮಾಡಲಾಗಿದೆ ಎಂದರು.
ಅನೇಕ ಮಠಾಧೀಶರು ಚಿಂತಕರು, ಸಾಹಿತಿಗಳ ಸಂಘ-ಸಂಸ್ಥೆಗಳ ವಿರೋಧ ವ್ಯಕ್ತಪಡಿಸಿದ್ದರೂ ಈ ಸರ್ಕಾರ ಈ ಪರಿಷ್ಕೃತ ಪಠ್ಯ ಪುಸ್ತಕವನ್ನು ಮಕ್ಕಳಿಗೆ ನೀಡಲು ಮುಂದಾಗಿದೆ. ಈ ಪಠ್ಯ ಪುಸ್ತಕ ಪರಿಷ್ಕರಣೆ ಎಲ್ಲಿ ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ಅಪಮಾನ ಮಾಡಲಾಗಿದೆ. ಆರನೇ ತರಗತಿ ಪಠ್ಯ ಪುಸ್ತಕದಲ್ಲಿ ವಾಲಿಕಾರ್ ಅವರು ಬರೆದ ನೀ ಹೋದ ಮರುದಿನ ಎಂಬ ಅಂಬೇಡ್ಕರ್ ಅವರ ಕುರಿತ ಪಠ್ಯವನ್ನು ಕೈಬಿಡಲಾಗಿದೆ. 7ನೇ ತರಗತಿ ಸಮಾಜ-ವಿಜ್ಞಾನ ವಿಷಯದ ಪಠ್ಯದಲ್ಲಿ ಅಂಬೇಡ್ಕರ್ ಅವರ ತಂದೆ-ತಾಯಿ ಹುಟ್ಟಿದ ಸ್ಥಳ ಸೇರಿದಂತೆ ಹಲವು ವಿವರಗಳನ್ನು ಕೈಬಿಡಲಾಗಿದೆ. ಅಂಬೇಡ್ಕರ್ ಅವರ ಹೋರಾಟದ ವಿಚಾರಗಳನ್ನು ಪಠ್ಯದಿಂದ ತೆಗೆದುಹಾಕಲಾಗಿದೆ ಎಂದು ರಾಮಲಿಂಗಾ ರೆಡ್ಡಿ ಆರೋಪಿಸಿದರು.
9ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ ಎಂಬ ಭಾಗವನ್ನು ತೆಗೆದು ಹಾಕಲಾಗಿದೆ. ಸಂವಿಧಾನ ರಚನೆಯಲ್ಲಿ ಬಿ ಎನ್ ರಾವ್ ಅವರ ಕೊಡುಗೆ ಅಪಾರ ಎಂದು ತಿಳಿಸಲಾಗಿದೆ. ಆ ಮೂಲಕ ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಅವರನ್ನು ಬಿಟ್ಟು ಬಿಎಂ ರವರೆ ಸಂವಿಧಾನ ರಚನೆ ಮಾಡಿದ್ದಾರೆ ಎಂದು ಬಿಂಬಿಸುವ ಪ್ರಯತ್ನ ನಡೆಸಲಾಗಿದೆ. 10ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ಗಾಂಧಿಯುಗ ಪಾಠದಲ್ಲಿ ಅಂಬೇಡ್ಕರ್ ಅವರ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿ ಧರ್ಮ ಸ್ವೀಕರಿಸಿದರು ಎಂಬ ಅಂಶವನ್ನು ಕೈಬಿಡಲಾಗಿದೆ. 9ನೇ ತರಗತಿಯ ಪಠ್ಯದಲ್ಲಿ ಅರವಿಂದ ಮಾಲಗತ್ತಿಯವರ ಮರಳಿ ಮನೆಗೆ ಎಂಬ ಪಠ್ಯವನ್ನು ತೆಗೆದುಹಾಕಲಾಗಿದೆ. 9ನೇ ತರಗತಿ ಪಠ್ಯದಲ್ಲಿ ಬಸವಣ್ಣನವರು ಜನಿವಾರ ಧರಿಸಿ ಕೂಡಲಸಂಗಮಕ್ಕೆ ತೆರಳಿದ್ದರು ಎಂದು ಉದ್ದೇಶಪೂರ್ವಕವಾಗಿ ಸೇರಿಸಲಾಗಿದೆ. ಜಾತಿ ವ್ಯವಸ್ಥೆ ವಿರುದ್ಧ ನಿಂತಿದ್ದ ಬಸವಣ್ಣನವರ ಬಗ್ಗೆ ತಪ್ಪು ಮಾಹಿತಿಯನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಅವರು ಜನಿವಾರವನ್ನು ಕಿತ್ತೆಸೆದು ಕೂಡಲಸಂಗಮಕ್ಕೆ ಹೋಗಿದ್ದು ಸತ್ಯ ಅಂಶವಾಗಿದೆ ಇದನ್ನು ಮರೆಮಾಚಿ ಪಠ್ಯದಲ್ಲಿ ಸುಳ್ಳನ್ನು ಸೇರಿಸಲಾಗಿದೆ ಮೂಲಕ ಬಸವಣ್ಣನವರಿಗೆ ಅಪಮಾನ ಮಾಡಲಾಗಿದೆ. ಇಷ್ಟೆಲ್ಲಾ ಆದರೂ ಸರ್ಕಾರ ಹಾಗೂ ಶಿಕ್ಷಣ ಸಚಿವ ನಾಗೇಶ್ ಅವರು ರೋಹಿತ್ ಚಕ್ರತೀರ್ಥ ಅವರ ಪರವಾಗಿ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಪಠ್ಯಪುಸ್ತಕದಲ್ಲಿ ಲಿಂಗಾಯತ ಧರ್ಮ ಹಾಗೂ ಬಸವಣ್ಣನವರಿಗೆ ಕಳಂಕ ಬರುವಂತೆ ತಪ್ಪು ಮಾಹಿತಿಯನ್ನು ನೀಡಲಾಗಿದೆ. ಕುವೆಂಪು ಅವರು ಬೇರೆಯವರ ಪ್ರೋತ್ಸಾಹದಿಂದ ದೊಡ್ಡ ಕವಿಯಾದರೂ ಎಂದು ಹೇಳುವ ಮೂಲಕ ಅವರಿಗೆ ಅಪಮಾನ ಮಾಡಲಾಗಿದೆ. ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟು ರಾಷ್ಟ್ರಕವಿ ಎಂದೇ ಖ್ಯಾತಿ ಪಡೆದ ಕುವೆಂಪು ಅವರ ಬಗ್ಗೆ ಈ ರೀತಿ ಕೆಟ್ಟ ಸಂದೇಶವನ್ನು ರವಾನಿಸಲಾಗುತ್ತಿದೆ. ಇನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಚಿಕ್ಕವಯಸ್ಸಿನಲ್ಲಿ ಪ್ರಾಣತ್ಯಾಗ ಮಾಡಿದ ಭಗತ್ ಸಿಂಗ್ ಅಂತಹ ಮಹಾನ್ ದೇಶಭಕ್ತರ ಪಠ್ಯವನ್ನು ಈ ಸರ್ಕಾರ ಕೈಬಿಟ್ಟಿದೆ. ನಾರಾಯಣಗುರುಗಳ ವಿಚಾರವಿದೆ ಪಟ್ಟವನ್ನು ಈ ಸಮಿತಿಗೆ ಬಿಟ್ಟಿದ್ದು ಬ್ರಹ್ಮಸಮಾಜ ಆರ್ಯಸಮಾಜ ಹಾಗೂ ವಿವೇಕಾನಂದರು ಹಾಗೂ ಪೆರಿಯಾರ್ ಅಂಶಗಳನ್ನು ಕೈಬಿಡಲಾಗಿದೆ ಎಂದು ಹೇಳಿದರು.
ಇನ್ನು ಮಹಿಳಾ ಸಾಧಕಿಯರ ಪಟ್ಟಿಯನ್ನು ಕೈಬಿಟ್ಟಿರುವ ಈ ಸಮಿತಿಯು ಮಹಿಳೆಯರಿಗೆ ಅಪಮಾನ ಮಾಡಿದೆ.ಬನ್ನಂಜೆಯವರು ಹೆಣ್ಣಿನ ಬಗ್ಗೆ ಕೆಟ್ಟದಾಗಿ ಬರೆದಿರುವ ಕೆಟ್ಟ ನಡತೆಯ ಸಿರಿ ಎಂಬ ಹೆಣ್ಣು ಎಂಬ ಬರಹವನ್ನು ಪಠ್ಯದಲ್ಲಿ ಸೇರಿಸಲಾಗಿದೆ. ಕನ್ನಡ ರಾಜ್ಯೋತ್ಸವ ಕುರಿತು ಇದ್ದ ಭುವನೇಶ್ವರಿ ಮೆರವಣಿಗೆ ಎಂಬ ಪಟ್ಟವನ್ನು ಈ ಸಮಿತಿಯು ತೆಗೆದುಹಾಕಿದೆ. ಇಷ್ಟೆಲ್ಲಾ ಪ್ರಮಾದಗಳನ್ನು ಮಾಡಿ ಈ ಸಮಿತಿಯು ಏನನ್ನು ಮಕ್ಕಳಿಗೆ ಕಲಿಸಲು ಹೊರಟಿದ್ದಾರೆ ಗೊತ್ತಿಲ್ಲ. ಚಕ್ರತೀರ್ಥ ವಿವಾದಿತ ಮನುಷ್ಯ. ಈ ವ್ಯಕ್ತಿ ನಾಡಗೀತೆಗೆ ಅಪಮಾನ ಮಾಡಿ ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ನಿಲುವನ್ನು ಸಮರ್ಥಿಸಿಕೊಂಡಿದ್ದ. ಈತ ವಿಕೃತ ಮನಸ್ಸಿನ ಮನುಷ್ಯ ಇಂತಹವರನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದರೆ ಏನಾಗುತ್ತದೆ ಎಂಬುದಕ್ಕೆ ಘಟನೆಗಳೇ ಸಾಕ್ಷಿ ಎಂದು ಹೇಳಿದರು.
ಈ ಸರ್ಕಾರಕ್ಕೆ ಸಂಬಂಧಪಟ್ಟಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. ದಾರೀಲಿ ಹೋಗುವ ದೆವ್ವವನ್ನು ಮೈಮೇಲೆ ಎಳೆದುಕೊಂಡರು ಎಂಬ ಮಾತಿನಂತೆ ರಾಜ್ಯಸರ್ಕಾರ ಈ ವ್ಯಕ್ತಿಗೆ ಸಮಿತಿಯ ಅಧ್ಯಕ್ಷತೆ ಜವಾಬ್ದಾರಿ ನೀಡಿ ಸರ್ಕಾರ ಎಂದು ಅಶಾಂತಿ ವಾತಾವರಣ ನಿರ್ಮಾಣ ಮಾಡಿದೆ. ಸರ್ಕಾರ ಕೂಡಲೇ ಈ ವ್ಯಕ್ತಿಯನ್ನು ಬಂಧಿಸಬೇಕು. ಬಿಜೆಪಿ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆ ಹೆಸರಲ್ಲಿ ಇತಿಹಾಸದ ಮೇಲೆ ಅತ್ಯಾಚಾರ ನಡೆಸುತ್ತಿದೆ. ಇದರ ವಿರುದ್ಧ ಮಠಾಧೀಶರು ಸಾಹಿತಿಗಳು ಚಿಂತಕರು ಎಲ್ಲರೂ ವಿರೋಧ ವ್ಯಕ್ತಪಡಿಸಿದರು ಇದಪ್ಪ ಚರ್ಮದ ಸರ್ಕಾರಕ್ಕೆತಾಗುತ್ತಿಲ್ಲ. ಬಸವಣ್ಣನವರ ಬಗ್ಗೆ ಇತಿಹಾಸ ತಿರುಚಿ ಬರೆದರು ಮುಖ್ಯಮಂತ್ರಿ ಬೊಮ್ಮಾಯಿ ಅವರು ಚಕಾರ ಎತ್ತುತ್ತಿಲ್ಲ. ಆ ಮೂಲಕ ತಮಗೆ ಅಧಿಕಾರವೇ ಮುಖ್ಯ ಉಳಿದೆಲ್ಲವೂ ಗೌಣ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದರು.
ರಾಜ್ಯಸಭೆ ಚುನಾವಣೆ ಕುರಿತು ಕೇಳಿದ ಪ್ರಶ್ನೆಗೆ, ‘ ಇನ್ನು ಮುಂದೆ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ಜೆಡಿಎಸ್ ನವರು ತೀರ್ಮಾನಿಸಿದ್ದಾರೆ ಕಾಂಗ್ರೆಸ್ ನವರು ತೀರ್ಮಾನಿಸಿದ್ದೇವೆ. ಅವರು ಕೊನೆಕ್ಷಣದಲ್ಲಿ ಕಾಂಗ್ರೆಸ್ ಬೆಂಬಲ ಕೋರಿದ್ದು ಪಕ್ಷದ ಹೈಕಮಾಂಡ್ ಅದಕ್ಕೆ ಸಮ್ಮತಿ ಸೂಚಿಸಲಿಲ್ಲ’ ಎಂದರು.