ಮಕ್ಕಾ, ಮದೀನಾ: ರಂಜಾನ್ ಇಹ್‌ತಿಕಾಫ್ ನೋಂದಣಿ ವೇಳಾಪಟ್ಟಿ ಪ್ರಕಟ

Prasthutha|

ಮಕ್ಕಾ: ಈ ವರ್ಷದ ರಂಜಾನಿನ ಇಹ್‌ತಿಕಾಫ್‌ಗಾಗಿ ಮಕ್ಕಾ ಮದೀನಾ ಉಭಯ ಹರಮ್‌ಗಳಲ್ಲಿ ನೋಂದಣಿ ಪ್ರಕ್ರಿಯೆ ಶಅಬಾನ್ 25ರಂದು ಪ್ರಾರಂಭಗೊಳ್ಳಲಿದೆ ಎಂದು ವರದಿಯಾಗಿದೆ.

- Advertisement -

ಇಹ್‌ತಿಕಾಫ್ ನೋಂದಣಿ ಪ್ರಕ್ರಿಯೆ ಶಅಬಾನ್ 25ರಂದು ಪ್ರಾರಂಭಗೊಂಡು ರಂಜಾನ್ 10ರಂದು ಅಂತ್ಯಗೊಳ್ಳಲಿದೆ ಎಂದು ಉಭಯ ಹರಮ್ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದೆ.

ಸಚಿವಾಲಯದ ಅಧಿಕೃತ ವೆಬ್‌ಸೈಟ್ ಮೂಲಕ ನಿಯಮಾನುಸಾರವಾಗಿ ಇಹ್‌ತಿಕಾಫ್ ನೋಂದಣಿಗೆ ಅನುಮತಿ ನೀಡಲಾಗಿದೆ.

- Advertisement -

ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ಭಾಗವಾಗಿ ಕಳೆದ ವರ್ಷ ಉಭಯ ಹರಂಗಳಲ್ಲಿ ಇಹ್‌ತಿಕಾಫ್ ಕುಳಿತುಕೊಳ್ಳುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

Join Whatsapp