ರಾಮ ದೇವರಲ್ಲ, ಬರಿಯ ಕಾಲ್ಪನಿಕ ಪಾತ್ರ ಎಂದ ಬಿಹಾರ್ ಮಾಜಿ ಮುಖ್ಯಮಂತ್ರಿ

Prasthutha|

ಬಿಹಾರ; “ನಾನು ರಾಮನನ್ನು ನಂಬುವುದಿಲ್ಲ, ರಾಮ ದೇವರಲ್ಲ. ರಾಮನು ತುಳಸಿದಾಸ್ ಮತ್ತು ವಾಲ್ಮೀಕಿ ಅವರು ಸಂದೇಶವನ್ನು ಹರಡಲು ಸೃಷ್ಟಿಸಿದ ಬರಿಯ ಕಾಲ್ಪನಿಕ ಪಾತ್ರ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಹೇಳಿದರು.

- Advertisement -

ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತಾತ್ಮಕ ಒಕ್ಕೂಟದ ಭಾಗವಾಗಿರುವ ಹಿಂದೂಸ್ತಾನ್ ಅವಾಮ್ ಮೋರ್ಚಾ (ಎಚ್ ಎ ಎಂ) ಮುಖ್ಯಸ್ಥನಿಂದ ರಾಮನ ಕುರಿತಾಗಿ ಈ ರೀತಿಯ ಹೇಳಿಕೆ ಬಂದಿರುವುದು ಮೈತ್ರಿಕೂಟದ ಹಲವರಲ್ಲಿ ಮುಜುಗರ ಉಂಟುಮಾಡಿದೆ.

ಗುರುವಾರ ಬಿ.ಆರ್. ಅಂಬೇಡ್ಕರ್ ಅವರ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಂಝಿ “ ವಾಲ್ಮೀಕಿ ಅವರು ರಾಮಾಯಣವನ್ನು ಬರೆದಿದ್ದಾರೆ ಮತ್ತು ಅವರ ಬರಹಗಳಲ್ಲಿ ಅನೇಕ ಉತ್ತಮ ಪಾಠಗಳಿವೆ. ನಾನು ಅದನ್ನು ನಂಬುತ್ತೇನೆ ಆದರೆ ನಾನು ತುಳಸಿದಾಸ್ ಮತ್ತು ವಾಲ್ಮೀಕಿಯನ್ನು ನಂಬುತ್ತೇನೆ ಆದರೆ ರಾಮನಲ್ಲ  ಎಂದು ಹೇಳಿದರು. ಈ ಜಗತ್ತಿನಲ್ಲಿ ಕೇವಲ ಎರಡು ಧರ್ಮಗಳಿವೆ, ಶ್ರೀಮಂತ ಮತ್ತು ಬಡವ ಎಂದು ಹೇಳಿ ಬ್ರಾಹ್ಮಣರು ದಲಿತರ ವಿರುದ್ಧ ತಾರತಮ್ಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

- Advertisement -

ರಾಮನ ಜನ್ಮವನ್ನು ಆಚರಿಸುವ ಮೆರವಣಿಗೆಯಲ್ಲಿ ಕೆಲವು ರಾಜ್ಯಗಳಲ್ಲಿ ಘರ್ಷಣೆಯ ಪರಿಣಾಮಗಳನ್ನು ಈ ಸಮಯದಲ್ಲಿ ಅವರು ನೆನಪಿಸಿದರು.



Join Whatsapp