ಬಾಬರಿ ಮಸ್ಜಿದ್ ತೀರ್ಪು ಕಾನೂನು ಆಧರಿಸಿಯೇ ಹೊರತು ಧರ್ಮಧಾರಿತವಲ್ಲ: ಮಾಜಿ ಸಿಜೆಐ ರಂಜನ್ ಗೊಗೊಯ್

Prasthutha|

ನವದೆಹಲಿ: ವಿವಾದಾತ್ಮಕ ಬಾಬರೀ ಮಸ್ಜಿದ್ – ರಾಮಮಂದಿರ ತೀರ್ಪು ಕಾನೂನು ಆಧರಿಸಿದೆಯೇ ಹೊರತು ಧರ್ಮಧಾರಿತವಲ್ಲ ಎಂದು ಭಾರತೀಯ ಮಾಜಿ ಮುಖ್ಯ ನ್ಯಾಯಮೂರ್ತಿ, ರಾಜ್ಯಸಭಾ ಸದಸ್ಯ ರಂಜನ್ ಗೊಗೊಯ್ ಹೇಳಿಕೆ ನೀಡಿದ್ದಾರೆ.

- Advertisement -

ಸೋಮವಾರ ವಾರಾಣಾಸಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಗೊಗೊಯ್, ಅಯೋದ್ಯೆ ವಿವಾದದ ತೀರ್ಪು ನನ್ನ ವೈಯಕ್ತಿಕ ನಿರ್ಧಾರವಲ್ಲ ಎಂದು ತಿಳಿಸಿದರು.

ನಿವೃತ್ತಿಯಾದ ಆರು ತಿಂಗಳ ಬಳಿಕ ರಾಜ್ಯಸಭೆ ನಾಮನಿರ್ದೇಶನಗೊಂಡಿದ್ದು, ಇದು ವಿರೋಧ ಪಕ್ಷಗಳ ತೀವ್ರ ಟೀಕೆಗೆ ಕಾರಣವಾಗಿತ್ತು.

- Advertisement -

ಸಾಕಷ್ಟು ವಿವಾದ ಮತ್ತು ಸಾವು ನೋವಿಗೆ ಕಾರಣವಾಗಿದ್ದ ಅಯೋಧ್ಯೆ ತೀರ್ಪಿನ ಸಂಬಂಧ ಐದು ನ್ಯಾಯಾಧೀಶರು ನಾಲ್ಕು ತಿಂಗಳಲ್ಲಿ 900 ಪುಟದ ತೀರ್ಪನ್ನು ಬರೆದಿದ್ದು, ಇದು ಕಾನೂನು ಮತ್ತು ಸಂವಿಧಾನವನ್ನು ಆಧರಿಸಿದೆಯೇ ಹೊರತು ಧರ್ಮಧಾರಿತವಲ್ಲ ಎಂದು ಗೊಗೊಯ್ ತಿಳಿಸಿದರು.

ನ್ಯಾಯಾಧೀಶರಿಗೆ ಸಂವಿಧಾನವೇ ಧರ್ಮ ಎಂದು ಈ ಸಂದರ್ಭದಲ್ಲಿ ಹೇಳಿದರು.

ಬಾಬರೀ ಮಸ್ಜಿದ್ – ರಾಮ ಜನ್ಮಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ 2019ರ ನವೆಂಬರ್ ನಲ್ಲಿ ಸುಪ್ರೀಮ್ ಕೋರ್ಟ್ ರಂಜನ್ ಗೊಗೊಯ್ ನೇತೃತ್ವದಲ್ಲಿ ಮಹತ್ವದ ನೀಡಿತ್ತು. ಈ ವೇಳೆ ನ್ಯಾಯಾಲಯವು ಬಾಬರೀ ಮಸೀದಿಯ ವಕ್ಫ್ ಭೂಮಿಯನ್ನು ರಾಮ ಜನ್ಮಭೂಮಿ ಟ್ರಸ್ಟ್ ಗೆ ನೀಡಿತ್ತು ಮತ್ತು ಫೈಝಾಬಾದ್ ಬಳಿ ಬಾಬರೀ ಮಸೀದಿ ನಿರ್ಮಾಣಕ್ಕೆ ಭೂಮಿ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಆದೇಶ ನೀಡಿತ್ತು.

ಮಾತ್ರವಲ್ಲ ಫ್ರಾನ್ಸ್ ನ ರಫೇಲ್ ಫೈಟರ್ ಜೆಟ್ ಗಳ ಖರೀದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದ್ದ ಸುಪ್ರೀಮ್ ಕೋರ್ಟ್ ನ ನೇತೃತ್ವವನ್ನು ಗೊಗೊಯ್ ವಹಿಸಿದ್ದರು. ಈ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಸೂಕ್ತ ತನಿಖೆಗೆ ಒತ್ತಾಯಿಸಿತ್ತು.

Join Whatsapp