ರಾಮಮಂದಿರವನ್ನು ಬಾಬರಿ ಮಸೀದಿಯ ಭೂಮಿಯಲ್ಲಿ ನಿರ್ಮಿಸಲಾಗಿದೆ: SDPI

Prasthutha|

ಬೆಂಗಳೂರು: ರಾಮಮಂದಿರವನ್ನು ನಿರ್ಮಿಸಿರುವ ಭೂಮಿ ವಕ್ಫ್ ಗೆ ಸೇರಿದ ಬಾಬರಿ ಮಸೀದಿಯ ಭೂಮಿಯಾಗಿದೆ. ಅಲ್ಲಿ ಮಂದಿರವನ್ನು ನಿರ್ಮಿಸಿದ್ದರೂ ಅದು ವಕ್ಫ್ ಸ್ವತ್ತಾಗಿದ್ದು, ಬಾಬರಿ ಮಸೀದಿಯ ಭೂಮಿಯಾಗಿಯೇ ಉಳಿಯಲಿದೆ ಎಂದು 2024 ರ ಜನವರಿ 19 ರಂದು ಬೆಂಗಳೂರಿನಲ್ಲಿ ನಡೆದ ಎಸ್‌‌ಡಿಪಿಐ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಸಭೆಯಲ್ಲಿ ಅಭಿಪ್ರಾಯಕ್ಕೆ ಬರಲಾಯಿತು.

- Advertisement -

ಸುಪ್ರೀಂ ಕೋರ್ಟ್ ಬಾಬರಿ ಮಸೀದಿ, ರಾಮ ಜನ್ಮ ಭೂಮಿ ವಿವಾದದ ಅಂತಿಮ ತಿರ್ಪಿನಲ್ಲಿ, ‘1949ರಲ್ಲಿ ಮಸೀದಿಯೊಳಗೆ ರಾಮಲಲ್ಲಾ ವಿಗ್ರಹವನ್ನು ಕಾನೂನು ಬಾಹಿರವಾಗಿ ಮತ್ತು ಅಕ್ರಮವಾಗಿ ಇಡಲಾಗಿದೆ ಮತ್ತು 1992ರಲ್ಲಿ ಮಸೀದಿ ಕೆಡವಿರುವುದು ಕಾನೂನುಬಾಹಿರ’ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ.

ಇತರರ ಭೂಮಿಯಲ್ಲಿ ಮಂದಿರ ನಿರ್ಮಾಣ ಅನೈತಿಕ ಮತ್ತು ಯಾವುದೇ ಧರ್ಮದ ತತ್ವಗಳಿಗೆ ವಿರುದ್ಧವಾಗಿದೆ ಎಂದು ಎಸ್‌ಡಿಪಿಐ ಕಾರ್ಯದರ್ಶಿ ಮಂಡಳಿ ಸಭೆ ಅಭಿಪ್ರಾಯ ವ್ಯಕ್ತಪಡಿಸಿದೆ.



Join Whatsapp