ಸಿದ್ದರಾಮಯ್ಯ ಜತೆ ಪಾದಯಾತ್ರೆಯಲ್ಲಿ ಸಾಗಿದ ರಕ್ಷಾ ರಾಮಯ್ಯ

Prasthutha|

ಬೆಂಗಳೂರು; ಮೇಕೆದಾಟು ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಪ್ರದೇಶ ಕಾಂಗ್ರೆಸ್ ಸಮಿತಿ ನಡೆಸುತ್ತಿರುವ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಅವರ ಜತೆ ಯುವ ಕಾಂಗ್ರೆಸ್ ಮುಖಂಡ ಎಂ.ಎಸ್.  ರಕ್ಷಾ ರಾಮಯ್ಯ ಹೆಜ್ಜೆ ಹಾಕಿದರು. 

- Advertisement -

ನಗರದ ಅರಮನೆ ಮೈದಾನದಿಂದ ಹೊರಟ ಯಾತ್ರೆ ಸ್ಯಾಂಕಿ ಕೆರೆ ವೃತ್ತದ ಬಳಿ ಇರುವ ಶಿವಾಜಿ ಮಹಾರಾಜರ ಪ್ರತಿಮೆ ವರೆಗೆ ಸಾಗಿತು. ಅಲ್ಲಿ ಸಿದ್ದರಾಮಯ್ಯ ಅವರು ಶಿವಾಜಿ ಮಹಾರಾಜರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಯಾತ್ರೆಯನ್ನು ಮುಂದುವರೆಸಿದರು. 

ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಶಾಸಕರಾದ ಭೀಮಾ ನಾಯಕ, ಅಂಜಲಿ ನಿಂಬಾಳ್ಕರ್ ಮತ್ತಿತರರ ಮುಖಂಡರು ಭಾಗಿಯಾಗಿದ್ದರು.

Join Whatsapp