5 ವರ್ಷದ ಮಗುವಿನ ಮೇಲೆ ಅತ್ಯಾಚಾರ: ಆರೋಪಿ ರಾಕೇಶ್ ವರ್ಮಾ ಬಂಧನ

Prasthutha|

ಸತ್ನಾ: 30 ವರ್ಷದ ವ್ಯಕ್ತಿಯೊಬ್ಬ 5 ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಸಿಟಿ ಕೊತ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ಜಗತ್ದೇವ್ ತಲಾಬ್ ಬಳಿ ನಡೆದಿದೆ.

- Advertisement -


ಜೀವನ್ ಜ್ಯೋತಿ ಕಾಲೋನಿ ನಿವಾಸಿ ರಾಕೇಶ್ ವರ್ಮಾ (30) ಅತ್ಯಾಚಾರ ಎಸಗಿದ ಆರೋಪಿ.


ಮಗುವನ್ನು ತನ್ನೊಂದಿಗೆ ನಗರದ ಹೊರವಲಯಕ್ಕೆ ಕರೆದೊಯ್ದು ಶಿವ ದೇವಾಲಯದ ಹಿಂದಿನ ದಾರಿ ಬಳಿ ಅತ್ಯಾಚಾರ ಎಸಗಿ ಬಳಿಕ ಮಗುವನ್ನು ಅಲ್ಲಿಯೇ ಬಿಟ್ಟು ಸ್ಥಳದಿಂದ ಓಡಿ ಹೋಗಿದ್ದಾನೆ. ವಿಷಯ ತಿಳಿದ ನಂತರ ಮಗುವನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು.

- Advertisement -

ಅತ್ಯಾಚಾರಕ್ಕೊಳಗಾದ ಮಗು ಸ್ಥಿತಿ ಗಂಭೀರವಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.

Join Whatsapp