ಚಂಡೀಗಢ: ರಾಜ್ಯಸಭೆ ಚುನಾವಣೆಗೂ ಮುನ್ನ ಆಡಳಿತಾರೂಢ ಬಿಜೆಪಿ-ಜೆಜೆಪಿ ಮೈತ್ರಿಕೂಟದ ಹರ್ಯಾಣ ಶಾಸಕರು ಚಂಡೀಗಢದ ರೆಸಾರ್ಟ್ ಗೆ ಶಿಫ್ಟ್ ಆಗಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜೆ.ಪಿ.ದಲಾಲ್, ಹೊಸ ಶಾಸಕರಿಗೆ ಮತದಾನದ ಕಾರ್ಯವಿಧಾನದ ಬಗ್ಗೆ ಮನವರಿಕೆ ಮಾಡಿಕೊಡಲು ಎಲ್ಲಾ ಶಾಸಕರನ್ನು ಕರೆಸಿದ್ದೇವೆ ಎಂದು ಹೇಳಿದರು.
“ಮುಂಬರುವ ರಾಜ್ಯಸಭಾ ಚುನಾವಣೆಗೆ ಮತದಾನ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ನಾವು ಇಲ್ಲಿಗೆ (ಒಬೆರಾಯ್ ಸುಖ್ವಿಲಾಸ್ ಸ್ಪಾ ರೆಸಾರ್ಟ್, ನ್ಯೂ ಚಂಡೀಗಢ) ಬಂದಿದ್ದೇವೆ. ಅನೇಕ ಶಾಸಕರು ಮೊದಲ ಬಾರಿಗೆ ಶಾಸಕರಾಗಿರುವುದರಿಂದ ಚುನಾವಣೆಗೆ ಸಂಬಂಧಿಸಿದ ಎಲ್ಲಾ ತಾಂತ್ರಿಕ ವಿವರಗಳನ್ನು ಚರ್ಚಿಸಲಾಗುವುದು. ಆದ್ದರಿಂದ ಯಾರು ಬಿಜೆಪಿಗೆ ಮತ್ತು ಪಕ್ಷೇತರರಿಗೆ ಮತ ಹಾಕುತ್ತಾರೆ ಎಂಬುದನ್ನು ನಿರ್ಧರಿಸಲಾಗುವುದು ಎಂದು ಅವರು ಹೇಳಿದರು.
ಜೂನ್ 10 ರಂದು ಚುನಾವಣೆ ನಡೆಯಲಿದೆ.