ರಾಜು ಕ್ಷತ್ರೀಯ ಒಕ್ಕೂಟ ಅಸ್ತಿತ್ವಕ್ಕೆ: ಸರ್ಕಾರಿ ಸೌಲಭ್ಯಗಳನ್ನು ತಲುಪಿಸಲು ಆದ್ಯತೆ – ಗೌರವಾಧ್ಯಕ್ಷ ಡಾ. ರಾಧಾಕೃಷ್ಣ ರಾಜು

Prasthutha|

ಬೆಂಗಳೂರು; ಸರ್ಕಾರದ ವಿವಿಧ ಸೌಲಭ್ಯಗಳನ್ನು ಸಮುದಾಯದ ಜನರಿಗೆ ತಲುಪಿಸುವ ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕರ್ನಾಟಕ ರಾಜು ಕ್ಷತ್ರೀಯ ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ.

- Advertisement -

ಕರ್ನಾಟಕ ರಾಜು ಕ್ಷತ್ರೀಯ ಒಕ್ಕೂಟದ ಗೌರವಾಧ್ಯಕ್ಷರಾಗಿ ಡಾ. ರಾಧಾಕೃಷ್ಣ ರಾಜು ನೇಮಕಗೊಂಡಿದ್ದು,  ನಗರದ ಚಾನ್ಸಲರಿ ಪೆವಿಲಿಯನ್ ನಲ್ಲಿ ಸಂಘದ ಮೊದಲ ಸಾಮಾನ್ಯ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಗೌರವಾಧ್ಯಕ್ಷ ಡಾ. ರಾಧಾಕೃಷ್ಣ ರಾಜು, ರಾಜು ಕ್ಷತ್ರೀಯ ಮತ್ತು ಕ್ಷತ್ರೀಯ ರಾಜು ಹಿಂದುಳಿದ ಸಮುದಾಯವಾಗಿದ್ದು, ಈ ಜನಾಂಗಕ್ಕೆ ಉಪಯೋಗವಾಗುವ ರೀತಿಯಲ್ಲಿ ಕೆಲಸ ಮಾಡುವ ಉದ್ದೇಶದಿಂದ ಒಕ್ಕೂಟ ರಚಿಸಲಾಗಿದೆ. ನಮ್ಮ ಸಮುದಾಯಕ್ಕೆ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಸಾಕಷ್ಟು ಸೌಲಭ್ಯಗಳು ದೊರೆಯುತ್ತಿವೆ. ಶಿಕ್ಷಣ, ವಿದ್ಯಾರ್ಥಿ ವೇತನ, ಸಬ್ಸಿಡಿ, ಆರೋಗ್ಯ ವಿಮೆ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಸೌಲಭ್ಯಗಳು ಲಭಿಸುತ್ತಿವೆ. ಜತೆಗೆ ಬಿಬಿಎಂಪಿಯಿಂದಲೂ ಸಹ ಸಾಕಷ್ಟು ಸೌಕರ್ಯಗಳಿವೆ. ಇವೆಲ್ಲವನ್ನೂ ಸೂಕ್ತ ರೀತಿಯಲ್ಲಿ ಜನ ಸಾಮಾನ್ಯರಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ ಎಂದರು.

- Advertisement -

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹಿಂದುಳಿದ ವರ್ಗಕ್ಕೆ ಕೋಟ್ಯಾಂತರ ರೂಪಾಯಿ ನೆರವು ದೊರೆಯುತ್ತಿದೆ. ಈ ಕುರಿತು ಜನ ಜಾಗೃತಿ ಮೂಡಿಸಲು ಒತ್ತು ನೀಡಲಾಗಿದೆ. ಜತೆಗೆ ಉದ್ಯೋಗ ಆಧರಿತ ಶಿಕ್ಷಣ ನೀಡುವ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಒಕ್ಕೂಟದ ಅಧ್ಯಕ್ಷ ಕೆ. ಶಾಮರಾಜು ಮಾತನಾಡಿ, ರಾಜು ಕ್ಷತ್ರೀಯ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು.  ಇದರಿಂದ ಹೆಚ್ಚಿನ ಜನರಿಗೆ ಸೌಲಭ್ಯ ತಲುಪಿಸಲು ಸಾಧ್ಯವಾಗಲಿದೆ. ಈ ಸಂಬಂಧ ಸರ್ಕಾರಕ್ಕೆ ಮನವಿ ಮಾಡಲಾಗುವುದು  ಎಂದು ಹೇಳಿದರು.

ಬಿಬಿಎಂಪಿ ಸದಸ್ಯ ಮಂಜುನಾಥ ರಾಜು ಅವರು, ರಾಜು ಕ್ಷತ್ರೀಯ ಸಮುದಾಯಕ್ಕೆ ದೊರಯುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.

ರಾಜು ಕ್ಷತ್ರೀಯ ಒಕ್ಕೂಟ ರಾಜ್ಯಮಟ್ಟದ ಸಭೆ 
ಕರ್ನಾಟಕ ರಾಜು ಕ್ಷತ್ರೀಯ ಒಕ್ಕೂಟದ ಗೌರವಾಧ್ಯಕ್ಷರಾಗಿ ಡಾ. ರಾಧಾಕೃಷ್ಣ ,ಒಕ್ಕೂಟದ ಅಧ್ಯಕ್ಷ ಕೆ. ಶಾಮರಾಜುರವರು ಕೊರೋನಾ ಸಂಕಷ್ಟ ಸಂದರ್ಭದಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸಿದ  ಹಲವರನ್ನು  ಗೌರವ ಸನ್ಮಾನವನ್ನು  ಕೆ  ನಾಗರಾಜು, ಏಟ್ರಿಯಾ ಗ್ರೂಪ್ ಆಫ್ ಹೋಟೆಲ್ , ನಂದನ ಪ್ಯಾಲೆಸ್ ಡಾ. ರವಿಚಂದ್ರನ್,   ಡಾ. ಮಧುಸೂಧನ್ ರಾಜು, ಡಾ. ದೀಪಾ ರಾಜು ಅವರನ್ನು ಗೌರವಿಸಲಾಯಿತು.  ಈ ಸಂದರ್ಭದಲ್ಲಿ  ಉಪಾಧ್ಯಕ್ಷ ಕೆ.ವಿ. ಕುಪ್ಪರಾಜು, ಪ್ರಧಾನ ಕಾರ್ಯದರ್ಶಿ ಆರ್. ಚಂದ್ರಶೇಖರ್ ರಾಜು,  ರವಿಕುಮಾರ್ ರಾಜು  ಪಾಲ್ಗೊಂಡಿದ್ದರು..

Join Whatsapp