ಬಿಜೆಪಿ ಅಭ್ಯರ್ಥಿಗಳನ್ನು ಬಹಿಷ್ಕರಿಸಲು ನಿರ್ಧರಿಸಿ ರಜಪೂತರು

Prasthutha|

ಮುಜಫರ್‌ನಗರ: ರಜಪೂತರು ಮಹಾಪಂಚಾಯತ್ ನಡೆಸಿದ ಬಳಿಕ ಮುಜಫರ್‌ನಗರ, ಕೈರಾನ ಮತ್ತು ಸಹರಣ್‌ಪುರ ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

- Advertisement -

ಕಿಸಾನ್ ಮಜ್ದೂರ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಮುದಾಯದ ಮುಖಂಡ ಠಾಕೂರ್ ಪೂರನ್ ಸಿಂಗ್ ಮಂಗಳವಾರ ಖೇಡದಲ್ಲಿ ಹಲವು ವಿಚಾರಗಳನ್ನು ಚರ್ಚಿಸಲು ಮಹಾಪಂಚಾಯತ್‌ಗೆ ಕರೆ ನೀಡಿದ್ದರು.

ಬಿಜೆಪಿಯು ಟಿಕೆಟ್ ವಿತರಣೆಯಲ್ಲಿ ಸಮುದಾಯವನ್ನು ನಿರ್ಲಕ್ಷಿಸಿದ್ದರಾರೆ ಎಂದು ರಜಪೂತರ ಅಸಮಾಧಾನವಾಗಿದೆ. ಅದರ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಬಹಿಷ್ಕಾರ ಹಾಕಲಾಗಿದೆ. ಈ ಪ್ರದೇಶಗಳ ರಜಪೂತ ಸಮುದಾಯದ ಮತದಾರರು ಬಿಜೆಪಿ ಅಭ್ಯರ್ಥಿಗಳಿಗೆ ಮತ ಚಲಾಯಿಸುವುದಿಲ್ಲ. ಅವರ ಬದಲು ಇತರೆ ಪಕ್ಷಗಳ ಪ್ರಬಲ ಅಭ್ಯರ್ಥಿಯನ್ನು ಬೆಂಬಲಿಸುತ್ತೇವೆ ಎಂದು ಠಾಕೂರ್ ಪೂರನ್ ಸಿಂಗ್ ಹೇಳಿದ್ದಾರೆ ಎಂದು ವರದಿಯಾಗಿದೆ.



Join Whatsapp