ಬೆಳಗಾವಿ: ನನ್ನ ಖಾಸಗಿ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ಈ ಬಗ್ಗೆ ದೂರು ನೀಡಲು ಬರುವ ಮಾಹಿತಿ ತಿಳಿದು ರಾಜಕುಮಾರ ಟಾಕಳೆ ನನ್ನ ವಿರುದ್ಧವೇ ದೂರು ನೀಡಿದ್ದಾರೆ. ರಾಜಕುಮಾರ್ ಟಾಕಳೆ ನನ್ನನ್ನೇ ಹನಿಟ್ರ್ಯಾಪ್ ಮಾಡಿದ್ದು, ಆತನ ವಿರುದ್ಧ ದೂರು ಕೊಡುತ್ತೇನೆ ಎಂದು ಯುವ ಕಾಂಗ್ರೆಸ್ ನಾಯಕಿ ನವ್ಯಶ್ರೀ ಆರ್ ರಾವ್ ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೃಪ್ತ ಶಾಸಕರು ಮುಂಬೈಗೆ ತೆರಳಿದಾಗ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ಮುಂಬೈಗೆ ಹೋಗಲು ಸಿಕ್ರೇಟ್ ಟಾಸ್ಕ್ ನೀಡಿದ್ದರು. ಅತೃಪ್ತ ಶಾಸಕರ ಚಲನವಲನ ನೋಡಿಕೊಳ್ಳುವ ಸಿಕ್ರೇಟ್ ಟಾಸ್ಕ್ ವಹಿಸಲಾಗಿತ್ತು. ಆ ಸಿಕ್ರೇಟ್ ಟಾಸ್ಕ್ ನಾನು ಯಶಸ್ವಿಯಾಗಿ ನಿಭಾಯಿಸಿದ್ದೇನೆ ಎಂದು ಹೇಳಿದರು.
ರಾಜಕುಮಾರ ಟಾಕಳೆ ವಿರುದ್ಧ ನಾನು ದೂರು ನೀಡುತ್ತೇನೆ. ಮೊದಲು ಪತ್ನಿ ಇದ್ದರು ಎರಡನೇ ಮದುವೆ ಆಗಿರೋ ಬಗ್ಗೆ ಮೋಸ, ಕಿಡ್ನಾಪ್, ಚಾರಿತ್ರ್ಯ ಹಗರಣ ಬಗ್ಗೆ ದೂರಿನಲ್ಲಿ ಉಲ್ಲೇಖಿಸುತ್ತೇನೆ. ನನ್ನ ಅಶ್ಲೀಲ ವೀಡಿಯೋ ವೆಬ್ ಸೈಟ್ ಗೆ ಮಾರಾಟ ಮಾಡಿದ್ದಾರೆ ಎಂಬ ಮಾಹಿತಿ ಇದೆ. ಆತನಿಂದಲೇ ನನಗೆ ಹನಿಟ್ರ್ಯಾಪ್ ಆಗಿದೆ ಎಂದರು.