ರಾಮಮಂದಿರ ನಿರ್ಮಾಣವಾಗ ಬೇಕೆಂದು ರಾಜೀವ್‌ ಗಾಂಧಿ ಬಯಸಿದ್ದರು: ಶಿವಸೇನೆ

Prasthutha|

ಮುಂಬೈ: ಆಹ್ವಾನ ದೊರಕಿದರೆ, ಕಾಂಗ್ರೆಸ್‌ ನಾಯಕರು ಅಯೋಧ್ಯೆಯ ರಾಮಮಂದಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ರಾಮಮಂದಿರ ನಿರ್ಮಾಣವಾಗ ಬೇಕೆಂದು ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅಭಿಪ್ರಾಯ ಪಟ್ಟಿದ್ದರು ಎಂದು ಶಿವಸೇನಾ (ಯುಬಿಟಿ) ಹೇಳಿದೆ.

- Advertisement -

ಜ. 22ರ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕಾಂಗ್ರೆಸ್‌ಗೆ ವಿಶೇಷ ಆಹ್ವಾನ ಬಂದರೆ ಪಕ್ಷದ ನಾಯಕರು ಅಯೋಧ್ಯೆಗೆ ಹೋಗಬೇಕು. ಅದರಲ್ಲಿ ತಪ್ಪೇನಿದೆ? ಕಾಂಗ್ರೆಸ್‌ನ ಆತ್ಮ ಹಿಂದೂ. ಅದರಲ್ಲಿ ಮುಚ್ಚಿಡುವಂಥದ್ದೇನೂ ಇಲ್ಲ. ಹಿಂದೂ ಸಂಸ್ಕೃತಿಯ ಬೆಳವಣಿಗೆಗೆ ಕಾಂಗ್ರೆಸ್‌ ಕೊಡುಗೆಯೂ ಇದೆ ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ತಿಳಿಸಿದೆ.

ಬಿಜೆಪಿಯನ್ನು ಕೆಣಕಿದ ಶಿವಸೇನೆ, ಬಾಬರಿ ಮಸೀದಿ ಧ್ವಂಸವಾದ ಸಂದರ್ಭದಲ್ಲಿ ಬಿಜೆಪಿ ನಾಯಕರೇನಾದರೂ ಪ್ರಧಾನಿ ಆಗಿದ್ದರೆ ಅವರು ಮಸೀದಿ ಕೆಡವಲು ಅವಕಾಶ ನೀಡುತ್ತಿರಲಿಲ್ಲ ಎಂದು ಹೇಳಿದೆ.

- Advertisement -

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್‌ ಎಂದಿಗೂ ವಿರೋಧಿಸಿರಲಿಲ್ಲ. ಅಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂದು ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅಭಿಪ್ರಾಯಪಟ್ಟಿದ್ದರು. ಅವರ ಸೂಚನೆಯ ಮೇರೆಗೆ ದೂರದರ್ಶನದಲ್ಲಿ ರಾಮಾಯಣ ಧಾರಾವಾಹಿ ಪ್ರಸಾರವಾಗಿತ್ತು ಎಂದು ಶಿವಸೇನೆ ಹೇಳಿದೆ.



Join Whatsapp