ರಾಜೀವ್ ಗಾಂಧಿ ಹತ್ಯೆ | 30 ವರ್ಷಗಳ ಬಳಿಕ ಮರಳಿದ ರಕ್ತಸಿಕ್ತ ಕ್ಯಾಪ್: ಕಣ್ತುಂಬಿಕೊಂಡ ಐಪಿಎಸ್ ಅಧಿಕಾರಿ ಪ್ರತೀಪ್ ಫಿಲಿಪ್

Prasthutha|

ನವದೆಹಲಿ: ಶ್ರೀಪೆರಂಬದೂರಿನಲ್ಲಿ 1991ರ ಮೇ 21 ರಂದು ನಡೆದ ಚುನಾವಣಾ RALLY ಯಲ್ಲಿ ಭಾಗವಹಿಸಿದ್ದ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರನ್ನು ಮಾನವ ಬಾಂಬ್ ಸ್ಫೋಟಿಸುವ ಮೂಲಕ ಹತ್ಯೆಮಾಡಲಾಗಿತ್ತು.

- Advertisement -


ಇದಾಗಿ 30 ವರ್ಷಗಳೇ ಸಂದಿವೆ. ಆದರೆ ಈ ಭಯಾನಕ ದಿನದಂದು RALLY ಯ ಭದ್ರತೆ ಜವಾಬ್ದಾರಿ ವಹಿಸಿದ್ದ ಐಪಿಎಸ್ ಅಧಿಕಾರಿ ಪ್ರತೀಪ್ ಫಿಲಿಪ್ ಅವರ ಬಾಳಲ್ಲೂ ಆಗಬಾರದ್ದು ಆಗಿಹೋಗಿತ್ತು. ಅದೇನೆಂದರೆ ಬಾಂಬ್ ಸ್ಫೋಟಗೊಂಡ ಜಾಗದಲ್ಲಿಯೇ ಇವರೂ ನಿಯೋಜನೆಯಲ್ಲಿದ್ದರು. ಈ ಸಂದರ್ಭದಲ್ಲಿ ಘಟನಾ ಸ್ಥಳದಲ್ಲಿ ಸಾಕ್ಷ್ಯಗಳನ್ನು ಸಿಬಿಐ ಸಂಗ್ರಹಿಸುವ ಸಂದರ್ಭದಲ್ಲಿ ಪ್ರತೀಪ್ ಅವರ ರಕ್ತಸಿಕ್ತವಾಗಿರುವ ಕ್ಯಾಪ್ ಮತ್ತು ನೇಮ್ ಬ್ಯಾಡ್ಜ್ ದೊರಕಿತ್ತು. ಸಾಕ್ಷ್ಯಗಳನ್ನು ಕೋರ್ಟ್ಗೆ ಸಲ್ಲಿಸುವ ಸಮಯದಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ಇವರ ಕ್ಯಾಪ್ ಮತ್ತು ಬ್ಯಾಡ್ಜ್ ಗಳನ್ನೂ ನೀಡಲಾಗಿತ್ತು.


ಪ್ರತೀಪ್ ಅವರಿಗೆ ಕ್ಯಾಪ್ ಮತ್ತು ನೇಮ್ ಬ್ಯಾಡ್ಜ್ ಭಾವನಾತ್ಮಕ ಸಂಬಂಧ ಇತ್ತು. ಆದರೆ ಅದು ಸಾಕ್ಷ್ಯದ ರೂಪದಲ್ಲಿ ಕೋರ್ಟ್ ದಾಖಲೆಗಳಲ್ಲಿ ಸೇರಿಹೋಗಿತ್ತು.
1998ರಲ್ಲಿ ಸುಪ್ರೀಂಕೋರ್ಟ್ ರಾಜೀವ್ಗಾಂಧಿ ಹಂತಕರಿಗೆ ಮರಣದಂಡನೆ ನೀಡಿದ ಸಂದರ್ಭದಲ್ಲಿ ಪ್ರತೀಪ್ ಅವರ ಕ್ಯಾಪ್ ಮತ್ತು ನೇಮ್ ಬ್ಯಾಡ್ಜ್ ಹಿಂದಿರುಗಿಸಲು ಆದೇಶಿಸಿತ್ತು. ಆದರೆ ರಾಜೀವಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ಸಿಬಿಐನ ವಿಶೇಷ ಆಯೋಗವು (ಎಂಡಿಎಂಎ) ತನಿಖೆ ನಡೆಸುತ್ತಿರುವ ಕಾರಣದಿಂದ ಪ್ರತೀಪ್ ಅವರ ಕ್ಯಾಪ್ ಮತ್ತು ನೇಮ್ ಬ್ಯಾಡ್ಜ್ ಬಹು ದೊಡ್ಡ ಸಾಕ್ಷ್ಯವಾಗಿದ್ದು, ಅದನ್ನು ಸದ್ಯ ಹಿಂದಿರುಗಿಸಲಾರದು ಎಂದಿತ್ತು. ಈ ಕಾರಣ ಇದುವರೆಗೂ ಅದು ಕೋರ್ಟ್ ವಶದಲ್ಲಿಯೇ ಇತ್ತು.
ಈ ನಡುವೆಯೇ, ಇದೀಗ ಪ್ರತೀಪ್ ಸೇವೆಯಿಂದ ನಿವೃತ್ತರಾಗಿದ್ದಾರೆ. ತಮ್ಮ ಸೇವಾ ಅವಧಿಯ ಅಂತಿಮ ಬೇಡಿಕೆಯನ್ನು ಈಡೇರಿಸುವಂತೆ ಅವರು ಕೋರ್ಟ್ ಮೊರೆ ಹೋಗಿದ್ದರು.

- Advertisement -


ಈ ಬ್ಯಾಡ್ಜ್ ಮತ್ತು ಕ್ಯಾಪ್ ಅನ್ನು ನಿವೃತ್ತಿಗೂ ಮುನ್ನ ಒಮ್ಮೆ ಕಣ್ತುಂಬಿಸಿಕೊಳ್ಳಬೇಕು ಎನ್ನುವುದು ಅವರ ಆಸೆಯಾಗಿತ್ತು. ಇದಕ್ಕೆ ಸ್ಪಂದಿಸಿರುವ ಕೋರ್ಟ್, ಒಂದು ಲಕ್ಷ ರೂಪಾಯಿ ಬಾಂಡ್ ಪಡೆದು ಅವುಗಳನ್ನು ಹಿಂದಿರುಗಿಸಿದೆ. ಆದರೆ ಒಂದು ತಿಂಗಳ ಮಟ್ಟಿಗೆ ಮಾತ್ರ ಅದನ್ನು ತಮ್ಮ ಬಳಿ ಇಟ್ಟುಕೊಳ್ಳಬಹುದು ಎಂದಿರುವ ಕೋರ್ಟ್ ಅಕ್ಟೋಬರ್ 28 ಅಥವಾ ಅದಕ್ಕಿಂತ ಮೊದಲು ನ್ಯಾಯಾಲಯಕ್ಕೆ ಹಿಂದಿರುಗಿಸಬೇಕು ಎಂದು ಸೂಚಿಸಿದೆ.



Join Whatsapp