ವಿದ್ಯಾರ್ಥಿನಿಯರ ಅಶ್ಲೀಲ ಫೋಟೋ ಅಪ್ಲೋಡ್ ಪ್ರಕರಣ : ಆರೋಪಿ ರಜನಿಕಾಂತ್ ಬಂಧನ

Prasthutha|

ಹುಬ್ಬಳ್ಳಿ: ಇನ್‍ಸ್ಟಾಗ್ರಾಮ್‍ನಲ್ಲಿ ವಿದ್ಯಾರ್ಥಿನಿಯರ ಅಶ್ಲೀಲ ಫೋಟೋ ಅಪ್ಲೋಡ್ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಹುಬ್ಬಳ್ಳಿ ಧಾರವಾಡ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ರೂವಾರಿ ಅದೇ ಕಾಲೇಜಿನ  ಹಳೇ ವಿದ್ಯಾರ್ಥಿ ಎಂಬ ವಿಚಾರ ತಿಳಿದು ಬಂದಿದೆ.

- Advertisement -

ಬಂಧಿತ ಆರೋಪಿಯನ್ನು ರಜನಿಕಾಂತ್ (21) ಎಂದು ಗುರುತಿಸಲಾಗಿದೆ. ಈತ ಕಳೆದ ಕೆಲವು ದಿನಗಳ ಹಿಂದೆ ಹುಬ್ಬಳ್ಳಿಯ ಕಾಲೇಜ್ ಒಂದರ ವಿದ್ಯಾರ್ಥಿನಿಯರ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದ. ಇದೇ ವಿಚಾರವಾಗಿ ವಿದ್ಯಾರ್ಥಿನಿಯರು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈತನೊಂದಿಗೆ ವಿದ್ಯಾರ್ಥಿನಿಯರು ಮಾತನಾಡುತ್ತಿರಲಿಲ್ಲ ಎಂಬ ಕಾರಣಕ್ಕೆ ಅವರನ್ನು ಟಾರ್ಗೆಟ್ ಮಾಡಿದ್ದ. ಯಾರಿಗೆಲ್ಲ ಬಾಯ್‍ಫ್ರೆಂಡ್ ಇದ್ದಾರೆ ಎಂದು ನೋಡಿಕೊಂಡು ಅಂಥವರನ್ನೇ ಗುರಿಯಾಗಿಸಿ ಆರೋಪಿ ಈ ಕೃತ್ಯ ಎಸಗಿದ್ದಾನೆ. ಆರೋಪಿಗೆ ಕಡಿಮೆ ಹಾಜರಾತಿ ಇದ್ದ ಕಾರಣ ಈ ಬಾರಿ ಆತನಿಗೆ ಅಡ್ಮಿಶನ್ ಕೊಟ್ಟಿರಲಿಲ್ಲ. ಈ ಎಲ್ಲಾ ಕಾರಣಗಳನ್ನು ಇಟ್ಟುಕೊಂಡು ಇಂತಹ ಕೃತ್ಯ ನಡೆಸಿದ್ದಾನೆ ಎನ್ನಲಾಗಿದೆ.

- Advertisement -

ಆರೋಪಿ ಈ ಕೃತ್ಯ ಎಸಗಿರುವುದಕ್ಕೆ ಕೆಲವು ದಾಖಲೆಗಳು ಸಿಕ್ಕಿವೆ. ಬ್ರೇನ್ ಮ್ಯಾಪಿಂಗ್‍ಗಾಗಿ ಎಫ್‍ಎಸ್‍ಐಎಲ್‍ಗೆ‌ (FSIL) ಪತ್ರ ಬರೆಯಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯಬೇಕಿದೆ ಎಂದು ಪೊಲೀಸ್ ಕಮಿಷನರ್ ಸಂತೋಷ ಬಾಬು ತಿಳಿಸಿದ್ದಾರೆ.

Join Whatsapp