ಕಾನೂನು ಪ್ರಕಾರ ಮಾಸ್ಕ್ ಕಡ್ಡಾಯಗೊಳಿಸುತ್ತೇವೆ: ರಾಜಸ್ಥಾನ ಮುಖ್ಯಮಂತ್ರಿ

ಜೈಪುರ: ಕಾನೂನು ಪ್ರಕಾರ ಮಾಸ್ಕ್ ಕಡ್ಡಾಯಗೊಳಿಸುತ್ತೇನೆಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ. ಮಾಸ್ಕ್ ಕೋವಿಡ್ ನಿಯಂತ್ರಣಕ್ಕೆ ಫಲಪ್ರದವಾದ ಔಷಧಿಯಾಗಿದೆ ಎಂದು ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಕೋವಿಡ್ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಒಂದು ರಾಜ್ಯವು ಮಾಸ್ಕ್ ನ್ನು ಕಾನೂನಿನ ಪ್ರಕಾರ ಕಡ್ಡಾಯಗೊಳಿಸುತ್ತಿದೆ.

- Advertisement -

ಕೋವಿಡ್ ತಡೆಗಟ್ಟಲು ಮಾಸ್ಕ್ ಕಡ್ಡಾಯಗೊಳಿಸಿ ಇಂದಿನಿಂದಲೇ ನಿಯಮ ಜಾರಿಗೊಳಿಸುವಂತೆ ಅಶೋಕ್ ಗೆಹ್ಲೋಟ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಮಾಲಿನ್ಯ ನಿಯಂತ್ರಣಕ್ಕಾಗಿ ಸಿಡಿಮದ್ದು ವ್ಯಾಪಾರ ಕೂಡ ನಿರ್ಬಂಧಿಸಿದೆ. ಸಿಡಿಮದ್ದು ಸಿಡಿಸುವುದಕ್ಕೂ ನಿಯಂತ್ರಣ ಹೇರಲಾಗಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ.

ಸಿಡಿಮದ್ದು ವ್ಯಾಪಾರಕ್ಕೆ ನೀಡಿರುವ ತಾತ್ಕಾಲಿಕ ಪರವಾನಗಿ ಕೂಡಲೇ ರದ್ದುಗೊಳಿಸಲಾಗುವುದು. ಮದುವೆ ಮತ್ತು ಇನ್ನಿತರ ಕಾರ್ಯಕ್ರಮಗಳಲ್ಲಿ ಸಿಡಿಮದ್ದು ಬಳಕೆಗೆ ನಿಯಂತ್ರಣ ಹೇರಲಾಗುವುದು ಎಂಬುದಾಗಿ ಅಶೋಕ್ ಗೆಹ್ಲೋಟ್ ವ್ಯಕ್ತಪಡಿಸಿದ್ದಾರೆ.

- Advertisement -