ಜೈಪುರ: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದವರಿಗೆ ಗಂಗಾಜಲ ಮತ್ತು ಗೋಮೂತ್ರ ಹಾಕಿ ಶುದ್ಧೀಕರಣ ಮಾಡಿರುವ ಪ್ರಸಂಗ ರಾಜಸ್ಥಾನದಲ್ಲಿ ನಡೆದಿದೆ.
ಪಕ್ಷಾಂತರಿಗೆ ಗಂಗಾಜಲ ಮತ್ತು ಗೋಮೂತ್ರ ಪ್ರೋಕ್ಷಣೆ ಮಾಡಿ ಶಾಸಕ ಬಾಲಮುಕುಂದ್ ಆಚಾರ್ಯ ಪಕ್ಷಕ್ಕೆ ಸ್ವಾಗತಿಸಿದ್ದಾರೆ.
ಜೈಪುರ ಮುನ್ಸಿಪಲ್ ಕಾರ್ಪೊರೇಷನ್ ಹೆರಿಟೇಜ್ (ಜೆಎಂಸಿಎಚ್) ಕಚೇರಿಯನ್ನು ಭ್ರಷ್ಟಾಚಾರದ ಆರೋಪದಿಂದ ಮುಕ್ತಗೊಳಿಸಬೇಕೆಂದು ಹವಾ ಮಹಲ್ ಶಾಸಕ ಆಚಾರ್ಯ ಅವರು, ಗಂಗಾಜಲ ಮತ್ತು ಗೋಮೂತ್ರ ಮಿಶ್ರಣವನ್ನು ಕೌನ್ಸಿಲರ್‌ಗಳು ಮತ್ತು ಆವರಣದ ಮೇಲೆ ಸಿಂಪಡಿಸಿದರು.
ಭ್ರಷ್ಟಾಚಾರದ ಆರೋಪ ಹೊತ್ತಿದ್ದ ಮಾಜಿ ಮೇಯರ್ ಮುನೇಶ್ ಗುರ್ಜರ್ ಅವರ ಜಾಗಕ್ಕೆ ಕುಸುಮ್ ಯಾದವ್ ಅವರನ್ನು ಆಯ್ಕೆ ಮಾಡಲಾಯಿತು. ಅವರಿಗೆ ಕಾಂಗ್ರೆಸ್ 7 ಮತ್ತು ಪಕ್ಷೇತರ ಒಬ್ಬ ಸದಸ್ಯರ ಬೆಂಬಲ ನೀಡಿದರು. ಇವರೆಲ್ಲ ಬಿಜೆಪಿ ಸೇರ್ಪಡೆಯಾದರು.