ರೈಲು ಹತ್ತುವಾಗ ಕಾಲು ಜಾರಿ ಬಿದ್ದು ತಂದೆ ಮಗಳು ಮೃತ್ಯು

Prasthutha|

ಜೈಪುರ್: ರೈಲು ಹತ್ತುವಾಗ ಆಯತಪ್ಪಿ ಬಿದ್ದು ತಂದೆ ಹಾಗೂ 5 ವರ್ಷದ ಮಗಳು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ರಾಜಸ್ಥಾನದ ಸಿರೋಹಿ ಜಿಲ್ಲೆಯ ಅಬು ರೋಡ್ ನಿಲ್ದಾಣದಲ್ಲಿ ನಡೆದಿದೆ.

- Advertisement -

ಭೀಮಾರಾವ್ ಎಂಬವರು ತಮ್ಮ ಪತ್ನಿ ಹಾಗೂ ಅವಳಿ ಮಕ್ಕಳೊಂದಿಗೆ ಪಾಲಿ ಜಿಲ್ಲೆಯ ಫಲ್ನಾಗೆ ತೆರಳಲು ಬಂದಿದ್ದರು.

ಭೀಮಾರಾವ್ ಕಿಕ್ಕಿರಿದು ತುಂಬಿದ್ದ ಸಬರಮತಿ-ಜೋಧ್​ಪುರ ಪ್ಯಾಸೆಂಜರ್​ ರೈಲು ಹತ್ತುವಾಗ ಸಮತೋಲನ ಕಳೆದುಕೊಂಡು ಮಗಳು ಮೋನಿಕಾ ಜತೆ ಕೆಳಗೆ ಬಿದ್ದಿದ್ದಾರೆ.

- Advertisement -

ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

Join Whatsapp