ಜೈಪುರ: ರಾಜಸ್ಥಾನ ವಿಧಾನಸಭೆ ಚುನಾವಣೆಯ ಮತದಾನ ಇಂದು (ಶನಿವಾರ) ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭಗೊಂಡಿದೆ.
ರಾಜ್ಯದ ಮುಖ್ಯಮಂತ್ರಿ ಮತ್ತು ಸರ್ದಾರ್ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಗೆಹ್ಲೋಟ್ ಅವರು ತಮ್ಮ ಕುಟುಂಬದೊಂದಿಗೆ ಮಹಾಮಂದಿರದಲ್ಲಿನ ವರ್ಧಮಾನ್ ಜೈನ ವಿದ್ಯಾಲಯದ ಬೂತ್ ಸಂಖ್ಯೆ 111ರಲ್ಲಿ ಮತ ಚಲಾಯಿಸಿದರು. ಮಾಜಿ ಸಿಎಂ ವಸುಂಧರಾ ರಾಜೆ ಅವರು, ಜಲಾವರ್ ನಗರದ ಹೌಸಿಂಗ್ ಬೋರ್ಡ್ ಸಮುದಾಯ ಭವನದಲ್ಲಿ ಸ್ಥಾಪಿಸಲಾದ ಮತಗಟ್ಟೆ ಸಂಖ್ಯೆ 32ರಲ್ಲಿ ಮತ ಚಲಾಯಿಸಿದರು. ಕೋಟಾದಲ್ಲಿ ಲೋಕಸಭಾ ಸ್ಪೀಕರ್ ಮತದಾನ ಮಾಡಿದರು.
ರಾಜ್ಯದಾದ್ಯಂತ ಒಟ್ಟು 51,507 ಮತಗಟ್ಟೆಗಳನ್ನು ತೆರೆಯಲಾಗಿದೆ ಎಂದು ರಾಜಸ್ಥಾನ ಮುಖ್ಯ ಚುನಾವಣಾ ಅಧಿಕಾರಿ ಪ್ರವೀಣ್ ಗುಪ್ತಾ ತಿಳಿಸಿದ್ದಾರೆ. ಒಟ್ಟು 1,862 ಅಭ್ಯರ್ಥಿಗಳು ಕಣದಲ್ಲಿದ್ದು 5,25,38,105 ಮತದಾರರು ಇದ್ದಾರೆ.
#WATCH | Rajasthan CM Ashok Gehlot casts his vote in Sardarpura assembly constituency pic.twitter.com/VvyN5lCdG1
— ANI (@ANI) November 25, 2023