ನವದೆಹಲಿ: ರಾಜಸ್ಥಾನ ಸರ್ಕಾರದ ಸಚಿವ ಸಂಪುಟದ ಪುನರ್ ರಚನೆಯ ಭಾಗವಾಗಿ ಭಾನುವಾರ ಸಂಜೆ ಸಂಜೆ 4 ಗಂಟೆಗೆ ರಾಜಭವನದಲ್ಲಿ ಹದಿನೈದು ಮಂದಿ ಶಾಸಕರು, ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನೂತನ ಮಂತ್ರಿಮಂಡಲದಲ್ಲಿ 11 ಕ್ಯಾಬಿನೆಟ್ ದರ್ಜೆ ಮತ್ತು ನಾಲ್ಕು ರಾಜ್ಯ ಸಚಿವರು ಒಳಗೊಂಡಿರುತ್ತಾರೆ ಎಂದು ಹೇಳಲಾಗಿದೆ.
ಪ್ರಸಕ್ತ ರಚನೆಯಾಗುತ್ತಿರುವ ನೂತನ ರಾಜಸ್ಥಾನ ಸರ್ಕಾರದಲ್ಲಿ ಸಚಿವ ಪೈಲಟ್ ಬಣದ ಐವರು ಸೇರಿದಂತೆ ಒಟ್ಟು 12 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ.
2018 ರ ಡಿಸೆಂಬರ್ ನಲ್ಲಿ ಅಧಿಕಾರಕ್ಕೆ ಬಂಧ ಗೆಹ್ಲೋಟ್ ಸರ್ಕಾರದ ಮೊದಲ ಕ್ಯಾಬಿನೆಟ್ ಪುನರ್ ರಚನೆ ಇದಾಗಿರುವುದು ವಿಶೇಷ.
ಸದ್ಯ ಹಾಲಿ ಸಚಿವರಾದ ಗೋವಿಂದ್ ಸಿಂಗ್ ದೋತಸ್ರಾ, ಹರೀಶ್ ಚೌಧರಿ ಮತ್ತು ರಘು ಶರ್ಮಾ ಅವರನ್ನು ಸಚಿವ ಸಂಪುಟದಿಂದ ಕೈಬಿಡಲಾಗಿದ್ದು, ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ. ಮುಖ್ಯಮಂತ್ರಿಗಳ ಶಿಫಾರಸಿನ ಮೇರೆಗೆ ಮೂವರು ಸಚಿವರಾದ ಮಮತಾ ಭೂಪೇಶ್, ಟಿಕಾರಾಂ ಜುಲ್ಲಿ ಮತ್ತು ಭಜನ್ ಲಾಲ್ ಜಾತಮ್ ಅವರನ್ನು ಕ್ಯಾಬಿನೆಟ್ ದರ್ಜೆಗೇರಿಸಲಾಗಿದೆ.
ಪ್ರಸಕ್ತ ರಾಜ್ಯಸ್ಥಾನ ಸರ್ಕಾರದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ ಗರಿಷ್ಠ 30 ಸಚಿವರನ್ನು ಹೊಂದಿದೆ. ನೂತನ ಸಚಿವ ಸಂಪುಟದಲ್ಲಿ ನಾಲ್ಕು ಪರಿಶಿಷ್ಟ ಜಾತಿ, ಮೂರು ಪರಿಶಿಷ್ಟ ಪಂಗಡ, ಮುಸ್ಲಿಮ್, ಪರಿಶಿಷ್ಟ ಜಾತಿ, ಗುಜ್ಜರ್ ಸಮುದಾಯಕ್ಕೆ ಸೇರಿದ ತಲಾ ಒಂದರಂತೆ ಮೂರು ಮಹಿಳೆಯರು ಒಳಗೊಂಡಿರುತ್ತಾರೆ ಎಂದು ಪಕ್ಷದ ಹೈಕಮಾಂಡ್ ಸ್ಪಷ್ಟಪಡಿಸಿದೆ.
ಹೇಮರಾಮ್ ಚೌಧರಿ, ಮಹೇಂದ್ರಜಿತ್ ಸಿಂಗ್ ಮಾಳವೀಯ, ರಾಮ್ಲಾಲ್ ಜಾಟ್, ಮಹೇಶ್ ಜೋಶಿ, ವಿಶ್ವೇಂದ್ರ ಸಿಂಗ್, ರಮೇಶ್ ಮೀನಾ, ಮಮತಾ ಭೂಪೇಶ್ ಭೈರ್ವಾ, ಭಜನ್ಲಾಲ್ ಜಾತವ್, ಟಿಕಾರಾಂ ಜೂಲಿ, ಗೋವಿಂದ್ ರಾಮ್ ಮೇಘವಾಲ್ ಮತ್ತು ಶಕುಂತ್, ಜಹಿದಾ, ಬ್ರಿಜೇಂದ್ರ ಸಿಂಗ್ ಓಲಾ, ರಾಜೇಂದ್ರ ದುರ್ಹಾ ಮತ್ತು ಮುರಳಿಲಾಲ್ ಮೀನಾ ಎಂಬವರು ರಾಜ್ಯದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಮಹೇಶ್ ಜೋಶಿ ಸರ್ಕಾರದ ಮುಖ್ಯ ಸಚೇತಕರಾಗಿ ಆಯ್ಕೆಯಾಗಿದ್ದಾರೆ.