ಜೂಜಾಟ: ನಟಿ ನೇಹಾ ಶೆಟ್ಟಿಯ ತಂದೆ ಸೇರಿ 42 ಮಂದಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

Prasthutha|

ಬೆಂಗಳೂರು,ಆ,3: ನಗರದಲ್ಲಿ ಕ್ಲಬ್​ವೊಂದರಲ್ಲಿ ಅಕ್ರಮ ಅಂದರ್ ಬಾಹರ್ ಜೂಜಾಟ ನಡೆಸುತ್ತಿದ್ದ ಉದ್ಯಮಿ ಹಾಗೂ ನಟಿಯ ತಂದೆ ಹರಿರಾಜ್ ಶೆಟ್ಟಿ ಸೇರಿದಂತೆ 42 ಮಂದಿ ಆರೋಪಿಗಳ ವಿರುದ್ಧ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ (ಚಾರ್ಜ್ ಶೀಟ್) ಸಲ್ಲಿಸಿದ್ದಾರೆ.

- Advertisement -

ನಟ ಗಣೇಶ್ ಅಭಿನಯದ ಮುಂಗಾರು ಮಳೆ- 2 ಚಿತ್ರದಲ್ಲಿ ನಟಿಸಿದ್ದ ನಟಿ ನೇಹಾ ಶೆಟ್ಟಿಯ ತಂದೆ ಹರಿರಾಜ್ ರಾಜ್ ಶೆಟ್ಟಿ ಹಾಗೂ ಆತನ ಜೂಜಾಟದ​ ಗ್ಯಾಂಗ್ ವಿರುದ್ಧ 1ನೇ ಎಸಿಎಂಎಂ ನ್ಯಾಯಾಲಯಕ್ಕೆ 250 ಪುಟಗಳಿರುವ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ‌.

ಕಳೆದ ಮಾ.13 ರಂದು ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಖಾಸಗಿ ಹೊಟೇಲ್ ನಲ್ಲಿ ಪೂಲ್ ಎನ್, ರಿ ಕ್ರಿಯೇಷನ್ ಕ್ಲಬ್ ಹೆಸರಿನಲ್ಲಿ ಬ್ಯಾನ್ ಸ್ಕಿಲ್ ಗೇಮ್, ವಿಡಿಯೋ ಗೇಮ್ ಪಾರ್ಲರ್ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಇನ್ಸ್​ಪೆಕ್ಟರ್​ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿದಾಗ  ಶೆಟ್ಟಿಯೊಂದಿಗೆ ಐವರು ಮಹಿಳೆಯರು ಸೇರಿದಂತೆ 42 ಮಂದಿ‌ ಜೂಜಿನಲ್ಲಿ ತೊಡಗಿಕೊಂಡಿದ್ದು ಅವರನ್ನು ಬಂಧಿಸಿ 1 ಲಕ್ಷಕ್ಕಿಂತ ಹೆಚ್ಚು ಹಣ ಜಪ್ತಿ ಮಾಡಲಾಗಿತ್ತು.

- Advertisement -

ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಿದಾಗ ಚಿಕ್ಕಬಳ್ಳಾಪುರ, ಬಳ್ಳಾರಿ ಹಾಗೂ ಆಂಧ್ರಪ್ರದೇಶ ಹಾಗೂ ‌ತಮಿಳುನಾಡು ರಾಜ್ಯಗಳಿಂದ ಜೂಜುಕೋರರ ಲಕ್ಷ ಲಕ್ಷ ಹಣ ತಂದು ಜೂಜು ಆಡಿಸುತ್ತಿರುವುದು ಬೆಳಕಿಗೆ ಬಂದಿತ್ತು.

ಹೊರ ರಾಜ್ಯಗಳಿಂದ ದಂಧೆಕೋರರನ್ನು ಕರೆಸುತ್ತಿದ್ದ ಹರಿರಾಜ್ ಶೆಟ್ಟಿ ನಗರದ ಉದ್ಯಮಿಗಳು, ಸರ್ಕಾರಿ ಅಧಿಕಾರಿಗಳ ಪತ್ನಿಯರು ಅಂದರ್ ಬಾಹರ್ ಭಾಗಿಯಾಗಿರುವುದು ಪತ್ತೆಯಾಗಿತ್ತು.

ಮಂಜುಳ, ಸ್ವಾತಿ, ಲಕ್ಷ್ಮಿ, ಗೀತಾದೇವಿ ಹಾಗೂ ಕ್ರಿಸ್ಟೀನ್ ಕುಮಾರಿ ಎಂಬುವರ ವಿರುದ್ದ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

Join Whatsapp