ಬೆಳ್ತಂಗಡಿ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟ ರಾಜ್ಯಪಾಲರ ನಿರ್ಧಾರದ ವಿರುದ್ಧ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟನೆ ನೀಡಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ವಿರುದ್ಧ ವ್ಯಕ್ತಿ ಒಬ್ಬರು ಕೊಟ್ಟ ದೂರನ್ನು ಪರಾಮರ್ಶಿಸಲು ಸಮಯ ತೆಗೆದುಕೊಳ್ಳದೆ ರಾಜ್ಯಪಾಲರು ನೋಟಿಸ್ ಜಾರಿ ಮಾಡಿದ್ದರು. ಸರ್ಕಾರ ಕೊಟ್ಟ ನೂರಾರು ಪುಟಗಳ ವಿವರಣೆಯನ್ನು ಓದಿ, ಕಾನೂನು ತಜ್ಞರೊಂದಿಗೆ ಚಿಂತನೆ ನಡೆಸಲು ಸಮಯ ತೆಗೆದುಕೊಳ್ಳದೆ ರಾಜ್ಯಪಾಲರು ಮುಖ್ಯಮಂತ್ರಿ ಗಳ ತನಿಖೆಗೆ ಅನುಮತಿ ನೀಡಿದ್ದಾರೆ.
ಈ ದೂರಿನಲ್ಲಿ ಸತ್ಯವಿದೆಯೇ, ಸುಳ್ಳಿದೆಯೇ ಎಂಬ ಪರಾಮರ್ಶೆ ಮಾಡದೆ ಎಲ್ಲವನ್ನೂ ತುರಾತುರಿಯಲ್ಲಿ ಮಾಡುತ್ತಿರುವ ರಾಜ್ಯಪಾಲರು ಯಾರ ನಿರ್ದೇಶನದ ಮೆರೆಗೆ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ ಎಂದು ಹೇಳಿದ್ದಾರೆ.