ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಸುರಿದ ಮಳೆ: ಕುಪ್ಪಳಿಸಿದ ಜನರು

Prasthutha|

ಬೆಂಗಳೂರು: ಬಳ್ಳಾರಿ, ಹಾವೇರಿ, ಬೀದರ್, ವಿಜಯಪುರ, ಶಿವಮೊಗ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸಂಜೆ ಗುಡುಗು ಸಹಿತ ಮಳೆಯಾಗಿದೆ. ಕಳೆದ ಮೂರು ವಾರಗಳಿಂದ ರಾಜ್ಯದ ಬಹುತೇಕ ಪ್ರದೇಶಗಳು ಅತಿಯಾದ ಬಿಸಿಲು ಮತ್ತು ಬಿಸಿಗಾಳಿಗೆ ತತ್ತರಿಸಿದ ಪ್ರದೇಶಗಳಲ್ಲಿ ಮಳೆ ಕಂಡು ಜನರು ಖುಷಿಯಾಗಿದ್ದಾರೆ.

- Advertisement -

ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ಇಂದು ಯುಗಾದಿ ದಿನ ಉಚ್ಚಂಗೆಮ್ಮನ ಜಾತ್ರೆಯಿತ್ತು. ಜಾತ್ರೆ ಸಮಯದಲ್ಲಿ ಮಳೆಯಾಗಿದ್ದಕ್ಕೆ ಖುಷಿಯಾದ ಜನರು ನೀರಿನಲ್ಲಿ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದ್ದಾರೆ.

ಕೊಪ್ಪಳದಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿ, ಸಣ್ಣ ಪ್ರಮಾಣದಲ್ಲಿ ಮಳೆಯಾಗಿದೆ. ಬಿರುಗಾಳಿ, ಗುಡುಗು, ಮಿಂಚು ಸಹಿತ ಕೊಪ್ಪಳ ವ್ಯಾಪ್ತಿಯಲ್ಲಿ ಮಳೆಯಾಗಿದೆ.

- Advertisement -

ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದ ದೇವಪ್ಪ ಗುಡದಾನೂರು ಎಂಬವರಿಗೆ ಸೇರಿದ ಮನೆಯ ಛಾವಣಿಯ ತಗಡಿನ ಶೀಟ್ ‌ಮಳೆಯಿಂದಾಗಿ ಹಾರಿ ಹೋಗಿದೆ

ಭಾರತೀಯ ಹವಾಮಾನ ಇಲಾಖೆಯು ಪೂರ್ವ ಮತ್ತು ಮಧ್ಯ ಹಾಗೂ ಪರ್ಯಾಯದ್ವೀಪದ ಭಾರತದಲ್ಲಿ ಆಲಿಕಲ್ಲು ಸಹಿತ ಮಳೆ ಬರುವ ಮುನ್ಸೂಚನೆಯನ್ನು ನೀಡಿದ್ದು, ಬಿಸಿಲಿನ ಝಳದಿಂದ ಬಳಲುತ್ತಿರುವವರಿಗೆ ನಿಟ್ಟುಸಿರು ಬಿಡುವಂತಾಗಿದೆ.

Join Whatsapp