ಬೆಂಗಳೂರಿನಲ್ಲಿ ಜಿಟಿ ಜಿಟಿ ಮಳೆ: ಮೈಕೊರೆಯುವ ಚಳಿ

Prasthutha|

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂಜಾನೆ 4 ಗಂಟೆಯಿಂದಲೂ ಜಿಟಿ, ಜಿಟಿ ಮಳೆ ಸುರಿಯುತ್ತಿದೆ. ಮಲ್ಲೇಶ್ವರಂ, ಶಾಂತಿನಗರ ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್, ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ.

- Advertisement -

ಇದರ ಜೊತೆಗೆ ಚಳಿ ಸಹ ಹೆಚ್ಚಾಗಿ ಹಗಲು ಕಡಿಮೆಯಾಗಿ ರಾತ್ರಿಯ ಅವಧಿ ಹೆಚ್ಚಾಗುತ್ತಿದೆ. ಮಳೆಯ ಕಾರಣ ಜೊತೆಗೆ ಶಾಲಾ-ಕಾಲೇಜು, ಕೆಲಸಗಳಿಗೆ ಹೋಗುವವರಿಗೂ ಬಹಳ ಕಿರಿಕಿರಿಯಾಗುತ್ತಿದೆ.
ಈ ನಡುವೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಾಳೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಿದೆ.
ಬೆಂಗಳೂರು ನಗರದಲ್ಲಿ ಇನ್ನು ಎರಡು, ಮೂರು ದಿನ ಮಳೆ ಮುಂದುವರೆಯಲಿದೆ.


ಇನ್ನು ತಮಿಳುನಾಡಿನಲ್ಲೂ ಸಹ ವರುಣನ ಆರ್ಭಟ ಮುಂದುವರೆದಿದೆ. ಚೆನ್ನೈ, ತಿರುವಳ್ಳೂರ್, ಚೆಂಗಲ್ಪಟ್ಟು, ಕಾಂಚೀಪುರಂ ಜಿಲ್ಲೆಗಳ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ವರದಿ ಹೇಳಿದೆ.

Join Whatsapp