ರಾಯಚೂರು ಎರಡೋಣ ಮಸೀದಿ ಮೇಲೆ ಸಂಘಪರಿವಾರದ ಗೂಂಡಾಗಳಿಂದ ದಾಳಿ, ದಾಂಧಲೆ: ಇಮಾಮ್ಸ್ ಕೌನ್ಸಿಲ್ ಖಂಡನೆ

Prasthutha|

ಬೆಂಗಳೂರು: ರಾಯಚೂರು ಲಿಂಗಸೂರು ಜಿಲ್ಲೆಯ ಎರಡೋಣ ಮಸೀದಿ ಮುಂಭಾಗ ಎಪ್ರಿಲ್ 3 ರಂದು ಮಧ್ಯಾಹ್ನ ನಮಾಝ್ ಸಮಯ ಮಸೀದಿಯ ಎದುರಿಗೆ ರಾಲಿ ಬಂದ ಸಂಘಪರಿವಾರದ ಗೂಂಡಾಗಳು ಇಲಾಖೆಯ ಯಾವುದೇ ಅನುಮತಿ ಇಲ್ಲದೇ ದ್ವನಿ ವರ್ಧಕ ಬಳಸಿ ಪ್ರಾರ್ಥನೆಗೆ ಅಡ್ಡಿಪಡಿಸಿ ಡಿಜೆ ಹಾಕಿ ಜೈಶ್ರೀರಾಮ್ ಘೋಷಣೆಯೊಂದಿಗೆ ಕುಣಿದು ಸಂಭ್ರಮಿಸಿದ್ದು ಇದನ್ನು ಇಮಾಮ್ಸ್ ಕೌನ್ಸಿಲ್ ಖಂಡಿಸಿದೆ.

- Advertisement -

ಪ್ರಾರ್ಥನೆ ಮುಗಿದ ನಂತರ ಇದನ್ನು ನಿಲ್ಲಿಸುವಂತೆ ವಿನಂತಿ ಮಾಡಿದ ಮುಸ್ಲಿಮರ ಮೇಲೆ ಹಲ್ಲೆ ನಡೆಸಿ ಮಸೀದಿ ಧ್ವಂಸ ಮಾಡುವ ಬೆದರಿಕೆ ಹಾಕಿ ಮಸೀದಿಗೂ ಕಲ್ಲು ತೂರಾಟ ನಡೆಸಿರುತ್ತಾರೆ. ಈ ಘಟನೆಯಿಂದ ಕೆಲವು ಮಂದಿ ಆಸ್ಪತ್ರೆ ಸೇರಿದ್ದಾರೆ. ಮಸೀದಿ ಪ್ರಾರ್ಥನೆ ಗೆ ಬಂದವರ ಮೇಲೂ ಸುಳ್ಳು ಕೇಸು ದಾಖಲು ಮಾಡಿ ಸಂಘಪರಿವಾರದ ಮೇಲೆ ದೂರು ದಾಖಲಿಸಿದಂತೆ ಬೆದರಿಸುವ ತಂತ್ರ ಪೋಲೀಸರಿಂದ ನಡೆಯುವುದಾಗಿ ತಿಳಿದು ಬಂದಿದೆ.

ಇಂತಹ  ಘಟನೆಗಳು  ಉದ್ದೇಶ ಪೂರ್ವಕವಾಗಿ ವಿಶೇಷ ವಾಗಿ ಮುಸ್ಲಿಮರ ಹಬ್ಬಗಳ ಸಂದರ್ಭದಲ್ಲಿ  ಆರೆಸ್ಸೆಸ್ಸ್ ಬಿಜೆಪಿ ಸಂಘಪರಿವಾರದ ಹಿಂದುತ್ವದ ಜನರು ಕೋಮು ಪ್ರಚೋದನೆ ಹರಡಿ ಗಲಭೆ ಅಶಾಂತಿ ಸೃಷ್ಟಿಸಿ ಧ್ವೇಷ ಶತ್ರುತ್ವ ಹರಡಿ ರಾಜಕೀಯ  ಲಾಭ ಪಡೆಯುವುದಕ್ಕಾಗಿ ಮಾಡುತ್ತಿರುವುದು.

- Advertisement -

ಇದರ ಬಗ್ಗೆ ಜಾತಿ ಧರ್ಮ ಎಂದು ನೋಡದೇ ಶಾಂತಿ ನೆಮ್ಮದಿಯ ಜೀವನ ಬಯಸುವ ಎಲ್ಲಾ ಜನರು ಒಟ್ಟಾಗಿ ಆರೆಸ್ಸೆಸ್ಸ್ ಸಂಘಪರಿವಾರದ ಜನರನ್ನು ನಿಯಂತ್ರಣ ಮಾಡಲು ಸರಕಾರದ ಮೇಲೆ ಒತ್ತಡ ಹಾಕಬೇಕು. ಆಡಳಿತ ಸರಕಾರ ಸಂವಿಧಾನ ಬದ್ಧವಾಗಿ ತನ್ನ ಕರ್ತವ್ಯವನ್ನು ನಿರ್ವಹಿಸಲು ತಯಾರಾಗಬೇಕು. ಪವಿತ್ರ  ರಂಝಾನ್ ತಿಂಗಳ ಪ್ರಾರ್ಥನೆ ಯನ್ನು ಗುರಿಪಡಿಸಿ ಸಂಘಪರಿವಾರದ ಗೂಂಡಾಗಳು ಹರಡುವ ಅಶಾಂತಿ ವಾತಾವರಣವನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ.




Join Whatsapp