ಯೋಗಿ ಸರಕಾರಕ್ಕೆ ಸಡ್ಡು | ಲಖಿಂಪುರ ಖೇರಿ ಪ್ರವೇಶಕ್ಕೆ ರಾಹುಲ್ ಗಾಂಧಿ ಸಿದ್ಧತೆ

Prasthutha|

ಉ.ಪ್ರದೇಶ: ರೈತರ ಮೇಲೆ ಹಿಂಸಾಚಾರ ನಡೆಸಿದ ಲಖಿಂಪುರ ಖೇರಿಗೆ ಇಂದು ಭೇಟಿ ನೀಡಲು ನಿರ್ಧರಿಸಿರುವ ರಾಹುಲ್ ಗಾಂಧಿ ಮತ್ತು ಐವರ ನಿಯೋಗಕ್ಕೆ ಉತ್ತರ ಪ್ರದೇಶ ಸರಕಾರ ಅನುಮತಿ ನಿರಾಕರಿಸಿದೆ. ಆದಾಗ್ಯೂ ಯೋಗಿ ಸರಕಾರದ ವಿರುದ್ಧ ಸಡ್ಡು ಹೊಡೆದು ರಾಹುಲ್ ಗಾಂಧಿ ಲಖಿಂಪುರ ಜಿಲ್ಲೆಗೆ ಪ್ರವೇಶಿಸಲು ಸಿದ್ಧತೆ ನಡೆಸಿದ್ದಾರೆ. ಮಧ್ಯಾಹ್ನ 1:30ರ ಸುಮಾರಿಗೆ ರಾಹುಲ್ ನಿಯೋಗ ಅಲ್ಲಿ ತಲುಪುವ ನಿರಿಕ್ಷೆ ಇದೆ.

- Advertisement -

ಈಗಾಗಲೇ ರಾಹುಲ್ ಗಾಂಧಿ, ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಚನ್ನಿ, ಛತ್ತೀಸ್ ಘಡ್ ಮುಖ್ಯಮಂತ್ರಿ ಭೂಪೇಶ್ ವಾಘೇಲ್, ರಾಜಸ್ಥಾನ್ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ಪಕ್ಷದ ಮುಖಂಡ ಕೆ ಸಿ ವೇಣುಗೋಪಾಲ್ ಜತೆ ಸೇರಿ ಲಕ್ನೋ ಕಡೆ ಪ್ರಯಾಣ ಬೆಳೆಸಲಿದೆ.

- Advertisement -

ಅಲ್ಲದೇ ಲಖಿಂಪುರ ಜಿಲ್ಲೆಗೆ ಭೇಟಿಗೆತ್ನಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶ ಸರಕಾರ ಗೃಹ ಬಂಧನದಲ್ಲಿಸಿರಿಸಿದ್ದು, ಪೊಲೀಸರು ಶಾಂತಿ ಭಂಗದ ಆರೋಪ ಹೊರಿಸಿ ಪ್ರಕರಣವನ್ನು ದಾಖಲಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಕ್ನೋ ಪೊಲೀಸ್ ಆಯುಕ್ತ ಡಿ.ಕೆ.ಠಾಕೂರ್ ಅವರು, ರಾಹುಲ್ ಗಾಂಧಿ ಲಕ್ನೋ ಗೆ ಆಗಮಿಸಿದರೆ, ಲಖಿಂಪುರ ಖೇರಿ ಮತ್ತು ಸೀತಾಪುರಕ್ಕೆ ಭೇಟಿ ನೀಡದಂತೆ ಮನವಿ ಮಾಡುತ್ತೇವೆ, ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಯಾರನ್ನೂ ಲಖಿಂಪುರ ಮತ್ತು ಸೀತಾಪುರಕ್ಕೆ ಯಾರನ್ನೂ ಬಿಡದಂತೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.

Join Whatsapp