ಹೊಸದಿಲ್ಲಿ: ಸಂಸತ್ತಿನಲ್ಲಿ ಮಾಡಿದ ಭಾಷಣಕ್ಕಾಗಿ ಧನ್ಯವಾದ ಹೇಳಿದ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮಿಳಿನಲ್ಲಿ ಉತ್ತರಿಸಿದ್ದಾರೆ.
“ಬಹುತ್ವ, ಫೆಡರಲ್ ಮತ್ತು ಸಹಕಾರಿ ಭಾರತವೆಂಬ ನಮ್ಮ ಸಾಮೂಹಿಕ ನಂಬಿಕೆ ಯಶಸ್ವಿಯಾಗುವುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ” ಎಂದು ರಾಹುಲ್ ಟ್ವೀಟ್‌ನಲ್ಲಿ ಹೇಳಿದ್ದಾರೆ.
ರಾಹುಲ್ ಸಂಸತ್ತಿನಲ್ಲಿ ನಡೆಸಿದ ತಮ್ಮ ಭಾಷಣದಲ್ಲಿ ತಮಿಳುನಾಡಿನ ಬಗ್ಗೆ ಹಲವು ಉಲ್ಲೇಖಗಳನ್ನು ಮಾಡಿದ್ದರೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಕಾಂಗ್ರೆಸ್ ನಾಯಕನಿಗೆ ಟ್ವೀಟ್ ಮಾಡಿ ಧನ್ಯವಾದ ಹೇಳಿದ್ದರು.
ಸ್ಟಾಲಿನ್ ಅವರ ಟ್ವೀಟ್ ಗೆ ತಮಿಳಿನಲ್ಲಿ ಉತ್ತರಿಸುವ ಮೂಲಕ ರಾಹುಲ್ ಗಮನ ಸೆಳೆದಿದ್ದಾರೆ.