ಪ್ರಧಾನಿ ಮೋದಿಗೆ ಒಂದೇ ವಾಕ್ಯದಲ್ಲಿ ಶುಭಕೋರಿದ ರಾಹುಲ್: ಇದು ಅವಮಾನ ಎಂದ ನೆಟ್ಟಿಗರು !

Prasthutha|

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬಕ್ಕೆ ರಾಹುಲ್​ ಗಾಂಧಿಯವರು ಒಂದೇ ಸಾಲಿನಲ್ಲಿ ಹುಟ್ಟುಹಬ್ಬದ ವಿಶ್​ ಮಾಡಿದ್ದಾರೆ. ಇಷ್ಟು ವರ್ಷ ಪ್ರಧಾನಿಗೆ ಜನ್ಮದಿನದ ಶುಭಾಶಯ ಕೋರುವಾಗ ನಾಲ್ಕು ಸಾಲು ಬರೆಯುತ್ತಿದ್ದರು. ವ್ಯಂಗ್ಯ ಮಾಡುತ್ತಿದ್ದರು. ಆದರೆ ಈ ಬಾರಿ ಹೆಚ್ಚೇನೂ ಬರೆಯದೇ ಒಂದೇ ಸಾಲಿನಲ್ಲಿ ‘ಹ್ಯಾಪಿ ಬರ್ತ್​ ಡೇ, ಮೋದಿ ಜಿ’ ಎಂದಿದ್ದಾರೆ.

ರಾಹುಲ್ ಗಾಂಧಿ ಹೀಗೆ ಒಂದೇ ಸಾಲಿನಲ್ಲಿ ಟ್ಟೀಟ್ ಮಾಡಿದ್ದು ಪ್ರಧಾನಿ ಮೋದಿಗೆ ಮಾಡಿದ ಅವಮಾನ ಎಂದು ಟ್ವಿಟ್ಟರ್ ನಲ್ಲಿ ನೆಟ್ಟಿಗರು ಅಭಿಪ್ರಾಯಿಸಿದ್ದಾರೆ.  

- Advertisement -

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬ ದಿನ ಕಾಂಗ್ರೆಸ್  ರಾಷ್ಟ್ರೀಯ ನಿರುದ್ಯೋಗ ದಿನವನ್ನು ಹಮ್ಮಿಕೊಂಡಿದೆ. ಅದರ ಅಂಗವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

- Advertisement -