ಬಾಲಕಿ ಕಾಲಿಗೆ ಚಪ್ಪಲಿ ತೊಡಿಸಿದ ರಾಹುಲ್ ಗಾಂಧಿ: ನೆಟ್ಟಿಗರಿಂದ ಮೆಚ್ಚುಗೆ

Prasthutha|

ತಿರುವನಂತಪುರಂ: ʼಭಾರತ್ ಜೋಡೋ ಯಾತ್ರೆʼ ವೇಳೆ ಜೊತೆಯಲ್ಲಿ ಸಾಗುತ್ತಿದ್ದ ಬಾಲಕಿಯ ಕಾಲಿಗೆ ಚಪ್ಪಲಿ ತೊಡಿಸುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರಳತೆ ಮೆರೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

- Advertisement -

ಯಾತ್ರೆಯ 11ನೇ ದಿನದ ವೀಡಿಯೋವೊಂದರಲ್ಲಿ, ಬಾಲಕಿಯೊಬ್ಬಳಿಗೆ ರಾಹುಲ್ ಗಾಂಧಿ ಪಾದರಕ್ಷೆ ತೊಡಿಸುತ್ತಿರುವ ದೃಶ್ಯ ಕಂಡುಬಂದಿದೆ. ಈ ವೀಡಿಯೋವನ್ನು ಮಹಿಳಾ ಕಾಂಗ್ರೆಸ್ ನ ಹಂಗಾಮಿ ಅಧ್ಯಕ್ಷೆ ನೆಟ್ಟಾ ಡಿಸೋಜಾ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ʼಸರಳತೆ ಮತ್ತು ಪ್ರೀತಿ. ದೇಶವನ್ನು ಒಗ್ಗೂಡಿಸಲು ಎರಡೂ ಅಗತ್ಯವಿದೆʼ ಎಂದು ಬರೆದುಕೊಂಡಿದ್ದಾರೆ.

Join Whatsapp