ಲಾಕಪ್ ನಲ್ಲಿ ಲೋಕತಂತ್ರದ ಮಾನಹರಣ: ಮಧ್ಯಪ್ರದೇಶ ಸರಕಾರದ ವಿರುದ್ಧ ರಾಹುಲ್ ಗಾಂಧಿ ಕೆಂಡ

Prasthutha|

►►ಪೊಲೀಸ್ ಠಾಣೆಯಲ್ಲಿ ಪತ್ರಕರ್ತನ್ನು ಒಳ-ಉಡುಪಿನಲ್ಲಿ ನಿಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿ ರಾಗಾ ಟ್ವೀಟ್

- Advertisement -

ನವದೆಹಲಿ: ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಕಾರ್ಯಕರ್ತರು ಮತ್ತು ಪತ್ರಕರ್ತರನ್ನು ಒಳ ಉಡುಪಿನಲ್ಲಿ ನಿಲ್ಲಿಸಿದ ಘಟನೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಸರಕಾರದ ವಿರುದ್ಧ ಕೆಂಡಕಾರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಲಾಕಪ್ ನಲ್ಲಿ ಲೋಕತಂತ್ರದ ನಾಲ್ಕನೇ ಸ್ತಂಭದ ಮಾನಹರಣ ಮಾಡಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.


ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಲಾಕಪ್ ನಲ್ಲಿ ಲೋಕತಂತ್ರದ ನಾಲ್ಕನೇ ಸ್ತಂಭದ ಮಾನಹರಣ ಮಾಡಲಾಗಿದೆ. ಪತ್ರಕರ್ತರು ಒಂದೋ ಸರಕಾರದ ಗುಣಗಾಣ ಮಾಡುತ್ತಿರಬೇಕು, ಇಲ್ಲವಾದರೆ ಜೈಲಿನ ಕಂಬಿ ಎಣಿಸುತ್ತಿರಬೇಕು ಇದು ಹೊಸ ಭಾರತದ ಸರಕಾರ, ಸತ್ಯಕ್ಕೆ ಹೆದರುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

- Advertisement -

ಸ್ಥಳೀಯ ಬಿಜೆಪಿ ಶಾಸಕ ಕೇದರನಾಥ ಶುಕ್ಲನ ವಿರುದ್ಧ ಫೇಸ್ ಬುಕ್ ಪೋಸ್ಟ್ ಮಾಡಿದ್ದ ಕಲಾವಿದನನ್ನು ಬಂಧಿಸಲಾಗಿತ್ತು. ಈ ಬಗ್ಗೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಪತ್ರಕರ್ತರು ಠಾಣೆ ಮುಂಭಾಗ ಪ್ರತಿಭಟಿಸಿದ್ದರು. ಠಾಣೆ ಮುಂಭಾಗ ಪ್ರತಿಭಟಿಸಿದ್ದಕ್ಕಾಗಿ ಇವರೆಲ್ಲರನ್ನು ಬಂಧಿಸಲಾಗಿತ್ತು. ಆ ಬಳಿಕ ಠಾಣೆಯೊಳಗೆ ಒಳ ಉಡುಪಿನಲ್ಲಿ ನಿಲ್ಲಿಸಿದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡಲಾಗಿತ್ತು. ಪೊಲೀಸರ ಈ ಅಮಾನವೀಯ ನಡೆಗೆ ನೆಟ್ಟಿಗರಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.

Join Whatsapp