ಬಾಗಲಕೋಟೆ: ಸಾವರ್ಕರ್ ಇದ್ದು ಬಂದ ಜೈಲಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಂದು ವಾರ ಇದ್ದು ಬಂದಲ್ಲಿ ರಾಜಕೀಯ ನಿವೃತ್ತಿ ನೀಡುತ್ತೇನೆ ಎಂದು ಬಿಜೆಪಿ ಮುಖಂಡ ಬಸನಗೌಡ ಪಾಟೀಲ ಯತ್ನಾಳ್ ಸವಾಲು ಹಾಕಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಯತ್ನಾಳ್, ವಿಧಾನಸೌಧ, ವಿಕಾಸ ಸೌಧ ಸೇರಿ ವಾಜಪೇಯಿ ಅವರಿದ್ದಾಗ ಪಾರ್ಲಿಮೆಂಟ್ ನಲ್ಲೂ ಸಾವರ್ಕರ್ ಪೋಟೋ ಹಾಕಿದ್ದೆವು. ಸಾವರ್ಕರ್ ಬಗ್ಗೆ ಇಂದಿರಾಗಾಂಧಿ ಸ್ಟ್ಯಾಂಪ್ ಸಹ ಬಿಡುಗಡೆ ಮಾಡಿದ್ದರು ಎಂದು ಹೇಳಿದರು.
ನನ್ನನ್ನು ಕಂಟ್ರೋಲ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ, ಯಾರ ಕಂಟ್ರೋಲ್ ಯಾರ ಮೇಲೂ ಇಲ್ಲ. ಎಲ್ಲವೂ ಜನರ ಕೈಯಲ್ಲಿದೆ. ಜನರಿಗೆ ಹೀರೋ ಮಾಡಲೂ ಝೀರೋ ಮಾಡಲೂ ಗೊತ್ತಿದೆ ಎಂದು ಹೇಳಿದರು.