ನವದೆಹಲಿ: ಭಾರತ್ ಜೋಡೊ ನ್ಯಾಯ ಯಾತ್ರೆ ವೇಳೆ ಕ್ಯಾಂಪ್ ಒಂದರಲ್ಲಿ ತಾವು ‘ಮಾರ್ಷಲ್ ಆರ್ಟ್ಸ್’ ಕಲೆಯನ್ನು ವಿದ್ಯಾರ್ಥಿಗಳಿಗೆ ಕಲಿಸುವ ವಿಡಿಯೊವನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಶೀಘ್ರವೇ ‘ಭಾರತ್ ಜೋಡೊ ಯಾತ್ರೆ’ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.
‘ಭಾರತ್ ಜೋಡೊ ನ್ಯಾಯ ಯಾತ್ರೆ ವೇಳೆ ನಾವು ಸಾವಿರಾರು ಕಿಲೋಮೀಟರ್ ಪ್ರಯಾಣಿಸಿದೆವು. ನಮ್ಮ ಕ್ಯಾಂಪ್ ನಲ್ಲಿ ‘ಜು–ಜಿಟ್ಸು’ ಅಭ್ಯಾಸ ಮಾಡುವುದು ದಿನಚರಿಯಾಗಿತ್ತು. ಫಿಟ್ ಆಗಿರಲು ಆರಂಭವಾದ ಈ ಅಭ್ಯಾಸ, ಬೇಗನೇ ಸಮೂಹ ಚಟುವಟಿಕೆಯಾಗಿ ಪರಿವರ್ತನೆಯಾಯಿತು. ಜೊತೆಗಿದ್ದ ಯಾತ್ರಿಗಳು ಹಾಗೂ ನಾವು ತಂಗುತ್ತಿದ್ದ ಪ್ರದೇಶದ ಸ್ಥಳೀಯ ವಿದ್ಯಾರ್ಥಿಗಳು ಒಟ್ಟು ಸೇರುತ್ತಿದ್ದರು’ ಎಂದು ರಾಹುಲ್ ಗಾಂಧಿ ವಿಡಿಯೊಗೆ ಹಾಕಿದ ಒಕ್ಕಣೆಯಲ್ಲಿ ಬರೆದುಕೊಂಡಿದ್ದಾರೆ.
ಈ ಸೌಮ್ಯ ಕಲೆಯನ್ನು ಅಭ್ಯಾಸ ಮಾಡಲು ಪ್ರೇರೇಪಿಸುವ ಆಶಯದೊಂದಿಗೆ ಶೀಘ್ರವೇ ಭಾರತ ಡೋಜೊ ಯಾತ್ರೆ ಬರಲಿದೆ’ ಎಂದು ಹೇಳಿದ್ದಾರೆ.
During the Bharat Jodo Nyay Yatra, as we journeyed across thousands of kilometers, we had a daily routine of practicing jiu-jitsu every evening at our campsite. What began as a simple way to stay fit quickly evolved into a community activity, bringing together fellow yatris and… pic.twitter.com/Zvmw78ShDX
— Rahul Gandhi (@RahulGandhi) August 29, 2024