ಬಿಳಿ ಬಣ್ಣದ ಟಿ ಶರ್ಟ್ ಧರಿಸುವ ಕಾರಣ ಬಹಿರಂಗಪಡಿಸಿದ ರಾಹುಲ್ ಗಾಂಧಿ

Prasthutha|

ನವದೆಹಲಿ: ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಬುಧವಾರ ತಮ್ಮ 54ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

- Advertisement -


ಇದೇ ಸಂದರ್ಭದಲ್ಲಿ ವೈಟ್ ಟಿ ಶರ್ಟ್ ಅಭಿಯಾನಕ್ಕೆ ಕೂಡ ಚಾಲನೆ ನೀಡಿದ್ದಾರೆ. ರಾಹುಲ್ ಗಾಂಧಿ ಸದಾ ಬಿಳಿ ಬಣ್ಣದ ಟಿ ಶರ್ಟ್ ಧರಿಸುವುದೇಕೆ ಎನ್ನುವ ಕುತೂಹಲ ಒಂದಿಷ್ಟು ಮಂದಿಯಲ್ಲಿ ಇರಬಹುದು. ಇದಕ್ಕೆ ಖುದ್ದಾಗಿ ರಾಹುಲ್ ಗಾಂಧಿಯೇ ಉತ್ತರ ನೀಡಿದ್ದಾರೆ.


ಹುಟ್ಟುಹಬ್ಬದ ಶುಭಾಶಯಗಳಿಗಾಗಿ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ನಾನು ಯಾವಾಗಲೂ ಬಿಳಿ ಟಿ-ಶರ್ಟ್ ಅನ್ನು ಏಕೆ ಧರಿಸುತ್ತೇನೆ ಎಂದು ನನ್ನನ್ನು ಆಗಾಗ ಜನರು ನನ್ನನ್ನು ಕೇಳುತ್ತಿರುತ್ತಾರೆ. ಈ ಟಿ ಶರ್ಟ್ ನನಗೆ ಪಾರದರ್ಶಕತೆ, ಸ್ಥಿರತೆ ಮತ್ತು ಸರಳತೆಯನ್ನು ಪ್ರತಿನಿಧಿಸುತ್ತದೆ ಎಂದು ಎಕ್ಸ್ ನಲ್ಲಿ ಬರೆದಿದ್ದಾರೆ.



Join Whatsapp