ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಒಂದು ವಾರದ ಯುರೋಪ್ ಪ್ರವಾಸಕ್ಕೆ ತೆರಳಿದ್ದು, ಈ ವೇಳೆ ಅವರು ಯುರೋಪಿಯನ್ ಯೂನಿಯನ್ ವಕೀಲರು, ವಿದ್ಯಾರ್ಥಿಗಳು ಮತ್ತು ಭಾರತೀಯ ವಲಸಿಗರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಸೆಪ್ಟೆಂಬರ್ 7 ರಂದು ರಾಹುಲ್ ಅವರು ಬ್ರಸೆಲ್ಸ್ನಲ್ಲಿ ವಕೀಲರನ್ನು ಭೇಟಿಯಾಗಲಿದ್ದು, ಜೊತೆಗೆ ಹೇಗ್ ನಲ್ಲಿ ಕೂಡ ಸಭೆಯನ್ನು ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಇನ್ನು ರಾಹುಲ್ ಗಾಂಧಿ ಸೆ. 8 ರಂದು ಪ್ಯಾರಿಸ್ನ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದು, ಇದಾದ ಬಳಿಕ ಅವರು ಸೆಪ್ಟೆಂಬರ್ 9 ರಂದು ಪ್ಯಾರಿಸ್ನಲ್ಲಿ ಫ್ರಾನ್ಸ್ನ ಲೇಬರ್ ಯೂನಿಯನ್ನ ಸಭೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಅವರು ನಾರ್ವೆಗೆ ಭೇಟಿ ನೀಡಲಿದ್ದಾರೆ, ಅಲ್ಲಿ ಅವರು ಸೆ. 10 ರಂದು ಓಸ್ಲೋದಲ್ಲಿ ಡಯಾಸ್ಪೊರಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎನ್ನಲಾಗಿದೆ.