ಅಧಿಕಾರದ ಮಧ್ಯೆ ಜನಿಸಿದರೂ ನನಗೆ ಅಧಿಕಾರದ ಬಗ್ಗೆ ಆಸಕ್ತಿಯೇ ಇಲ್ಲ: ರಾಹುಲ್ ಗಾಂಧಿ

Prasthutha|


ನವದೆಹಲಿ: ನಾನು ಅಧಿಕಾರದ ಮಧ್ಯೆಯೇ ಜನಿಸಿದವನು. ನಿಜ ಹೇಳಬೇಕೆಂದರೆ ಅಂದರೆ ನನಗೆ ಅಧಿಕಾರದಲ್ಲಿ ಆಸಕ್ತಿಯೇ ಇಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

- Advertisement -


ನವದೆಹಲಿಯ ಜವಾಹರ್ ಭವನದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ “ದಿ ದಲಿತ್ ಟ್ರುಥ್’ ಪುಸ್ತಕ ಬಿಡುಗಡೆ ಮಾಡಿದ ರಾಹುಲ್ ಗಾಂಧಿ ಮಾತನಾಡಿದರು.
ಹಲವು ರಾಜಕಾರಣಿಗಳಿಗೆ ಅಧಿಕಾರದ ಮೇಲೆಯೇ ಆಸಕ್ತಿ ಇರುತ್ತದೆ. ಅವರು ಅಧಿಕಾರವನ್ನೇ ಹುಡುಕುತ್ತಿರುತ್ತಾರೆ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ತನಕ ಅಧಿಕಾರದ ಬಗ್ಗೆಯೇ ಕನಸು ಕಾಣುತ್ತಾರೆ. ಅದರ ಬಗ್ಗೆಯೇ ಚರ್ಚೆ ನಡೆಸುತ್ತಿರುತ್ತಾರೆ. ಭಾರತದಲ್ಲೀಗ ಅಂಥವರೇ ತುಂಬಿದ್ದಾರೆ. ಆದರೆ ಅಧಿಕಾರದ ವಿಷಯವಾಗಿ ನನ್ನಲ್ಲೊಂದು ಸಮಸ್ಯೆ ಇದೆ. ಇದು ಅಚ್ಚರಿಯ ವಿಷಯ, ನಾನು ಅಧಿಕಾರದ ಮಧ್ಯೆಯೇ ಜನಿಸಿದವನು, ಅಚ್ಚರಿಯ ವಿಷಯ ಅಂದರೆ ನನಗೆ ಅಧಿಕಾರದಲ್ಲಿ ಆಸಕ್ತಿಯೇ ಇಲ್ಲ. ನಾನು ಸತ್ಯ ಹೇಳುತ್ತಿದ್ದೇನೆ. ನಾನು ರಾತ್ರಿ ಮಲಗುವಾಗ ನನ್ನ ದೇಶವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ದೇಶದೊಂದಿಗೆ ಪ್ರೀತಿ ಇದೆ, ಪ್ರೇಮಿಯೊಬ್ಬ ಯಾರನ್ನು ಪ್ರೀತಿಸುತ್ತಿರುವನೋ ಅವರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ.

ಬೆಳಗ್ಗೆ ಎದ್ದಾಗಲೂ ದೇಶವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಈ ದೇಶವು ಕಾರಣ ಇಲ್ಲದೇ ನನಗೆ ಎಣಿಸಲಾಗದಷ್ಟು ಪ್ರೀತಿ ಕೊಟ್ಟಿದೆ. ದೇಶ ನನಗೆ ಕೊಟ್ಟಿರುವ ಪ್ರೀತಿ ಗೌರವಗಳನ್ನು ನಾನು ಹೇಗೆ ನಿಭಾಯಿಸಬೇಕು ಎಂದು ಬೆಳಗ್ಗೆ ಏಳುವಾಗಲೇ ಯೋಚಿಸುತ್ತೇನೆ. ದೇಶ ನನಗೆ ಕೇವಲ ಪ್ರೀತಿಯನ್ನಷ್ಟೇ ಕೊಟ್ಟಿಲ್ಲ, ದೇಶ ನನಗೆ ಚಪ್ಪಲಿಯಲ್ಲೂ ಹೊಡೆದಿದೆ. ಇದು ನಿಮಗೆ ಅರ್ಥ ಆಗುವುದಿಲ್ಲ. ಎಷ್ಟು ತೀವ್ರವಾಗಿ ಎಷ್ಟು ಹಿಂಸೆಯಿಂದ ದೇಶ ನನಗೆ ಹೊಡೆದಿದೆ ಥಳಿಸಿದೆ. ಇದು ಯಾಕೆ ನಡೀತಿದೆ ಎಂದು ನಾನು ಯೋಚಿಸಿದೆ. ಆಗ ನನಗೆ ಉತ್ತರ ಸಿಕ್ಕಿತು; ದೇಶ ನಿನಗೆ ಕಲಿಸಿಕೊಡಲು ಮುಂದಾಗಿದೆ ಎಂದು. ನೀನು ಕಲಿತುಕೋ, ನೀನು ಅರ್ಥ ಮಾಡಿಕೊ ಎಂದು ದೇಶ ನನಗೆ ಹೇಳುತ್ತಿದೆ. ಎಷ್ಟೇ ನೋವಿದ್ದರೂ ನೀನು ಕಲಿ, ಅರ್ಥ ಮಾಡಿಕೊ ಎಂದು ದೇಶ ನನಗೆ ಹೇಳುತ್ತಿದೆ ಎಂದು ರಾಹುಲ್ ಗಾಂಧಿ ಮಾರ್ಮಿಕವಾಗಿ ಹೇಳಿದರು.
ಸಂವಿಧಾನ ಭಾರತದ ಆಯುಧ. ಆದರೆ ಸಾಂವಿಧಾನಿಕ ಸಂಸ್ಥೆಗಳೇ ಇಲ್ಲದಿದ್ದರೆ ಸಂವಿಧಾನ ಅರ್ಥ ಕಳೆದುಕೊಳ್ಳುತ್ತದೆ. ಈ ಸಂಸ್ಥೆಗಳನ್ನು ಹೊರತುಪಡಿಸಿದರೆ ಸಂವಿಧಾನಕ್ಕೆ ಅರ್ಥವೇ ಇರುವುದಿಲ್ಲ. ನಾವು ಸಂವಿಧಾನ ಹಿಡಿದುಕೊಂಡು ಹುಡುಕಾಡುತ್ತಿದ್ದೇವೆ, ಸಂವಿಧಾನವನ್ನು ರಕ್ಷಣೆ ಮಾಡಬೇಕು ಎಂದು ನಾವು ಹೇಳುತ್ತಿದ್ದೇವೆ. ಆದರೆ ಸಂವಿಧಾನವನ್ನು ಹೇಗೆ ಜಾರಿ ಮಾಡಲಾಗುತ್ತದೆ? ಸಂಸ್ಥೆಗಳ ಮೂಲಕ ಸಂವಿಧಾನದ ಆಶಯಗಳನ್ನು ಅನುಷ್ಠಾನ ಮಾಡಲಾಗುತ್ತದೆ. ಎಲ್ಲಾ ಸಂಸ್ಥೆಗಳು ಆರ್ ಎಸ್ ಎಸ್ ನ ಹಿಡಿತದಲ್ಲಿವೆ.

- Advertisement -

ನನ್ನ ನಿಮ್ಮ ಕೈನಲ್ಲಿ ಈ ಸಂಸ್ಥೆಗಳು ಇಲ್ಲ. ಸಂಸ್ಥೆಗಳು ನಮ್ಮ ಕೈಯಲ್ಲಿ ಇಲ್ಲ ಅಂದರೆ ಸಂವಿಧಾನವೂ ನಮ್ಮ ಕೈನಲ್ಲಿ ಇಲ್ಲ. ಇದೇನು ಹೊಸ ಆಕ್ರಮಣ ಅಲ್ಲ, ಮಹಾತ್ಮ ಗಾಂಧಿಯವರ ದೇಹಕ್ಕೆ ಮೂರು ಗುಂಡುಗಳು ಹೊಕ್ಕಿದಾಗಲೇ ಆಗಲೇ ಈ ಆಕ್ರಮಣ ಶುರುವಾಗಿತ್ತು ಎಂದು ರಾಹುಲ್ ಗಾಂಧಿ ಮಾರ್ಮಿಕವಾಗಿ ಹೇಳಿದರು.
ಪೆಗಸಾಸ್, ಸಿಬಿಐ, ಇ.ಡಿ ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸುತ್ತಿದೆ. ಮಾಯಾವತಿ ಚುನಾವಣೆಯಲ್ಲಿ ಹೋರಾಡಲಿಲ್ಲ. ಮೈತ್ರಿ ಮಾಡಿ ನೀವೇ ಸಿಎಂ ಆಗಿ ಎಂದು ನಾವು ಮಾಯಾವತಿಯವರಿಗೆ ಸಂದೇಶ ನೀಡಿದ್ದೆವು. ಆದರೆ ಮಾಯಾವತಿ ನಮ್ಮ ಬಳಿ ಮಾತೇ ಆಡಲಿಲ್ಲ. ಗೌರವಾನ್ವಿತ ಕಾನ್ಶಿರಾಂ ಅವರು ತನ್ನ ಬೆವರು ರಕ್ತ ಬಸಿದು ಕೊಟ್ಟಿದ್ದ ದಲಿತರ ಅಸ್ಮಿತೆಯನ್ನು ಮಾಯಾವತಿ ಇಲ್ಲವಾಗಿಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದರು.


ನನ್ನ ದೇಶದಲ್ಲಿರುವ ಕೆಲವು ಜನರು ಇನ್ನೊಬ್ಬನನ್ನು ಮುಟ್ಟಲು ನಿರಾಕರಿಸುವುದನ್ನು ಒಪ್ಪಲು ನನ್ನಿಂದ ಸಾಧ್ಯವಿಲ್ಲ. ಮನುಷ್ಯರು ನಾಯಿಯನ್ನು ಮುಟ್ಟುತ್ತಾರೆ, ಕೀಟಗಳನ್ನು ಕೈನಲ್ಲೇ ಕೊಲ್ಲುತ್ತಾರೆ. ಕುದುರೆ ಸಾಕುತ್ತಾರೆ, ಅದೇ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಮುಟ್ಟಲು ನಿರಾಕರಿಸುತ್ತಾನೆ. ಹೀಗೆ ಯಾಕೆ ಅಂತ ನನಗೆ ಅರ್ಥ ಆಗುತ್ತಿಲ್ಲ ಎಂದು ದೇಶದ ಜಾತಿ ವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು.


ಸದ್ಯ ಇಡೀ ಜಗತ್ತಿನಲ್ಲಿ ಭಾರತದಲ್ಲಿ ಮಾತ್ರ ಈ ಮನಸ್ಥಿತಿ ಇದೆ. ನಾನು ನಾಯಿಯನ್ನು ಮುಟ್ಟುತ್ತೇನೆ, ಕೀಟವನ್ನು ಹೊಡೆದು ಕೊಲ್ಲುತ್ತೇನೆ, ಆದರೆ ಮನುಷ್ಯನನ್ನು ಮುಟ್ಟಲ್ಲ ಎಂದು ಇಲ್ಲಿನ ಜನ ಸಾರಿ ಹೇಳುತ್ತಿದ್ದಾರೆ. ಈ ಮನಸ್ಥಿತಿ ಬದಲಾಗದೆ ಜಾತಿ ವ್ಯವಸ್ಥೆ ಹೋಗಲಾರದು ಎಂದು ರಾಹುಲ್ ಗಾಂಧಿ ಹೇಳಿದರು.



Join Whatsapp