ಪ್ರಿಯಾಂಕಾ ಗಾಂಧಿಗೆ ಮುತ್ತಿಟ್ಟ ರಾಹುಲ್ ಗಾಂಧಿ:  ಅಣ್ಣ-ತಂಗಿಯ ಪ್ರೀತಿಗೆ ನೆಟ್ಟಿಗರು ಫಿದಾ

Prasthutha|

ನವದೆಹಲಿ: ಭಾರತ್ ಜೋಡೋ ಯಾತ್ರೆಯ ವೇದಿಕೆ ಮೇಲೆ ರಾಹುಲ್ ಗಾಂಧಿ ಅವರು ತಮ್ಮ ತಂಗಿ ಪ್ರಿಯಾಂಕಾರನ್ನು ಅಪ್ಪಿ ಮಮತೆಯ ಮುತ್ತುಗಳನ್ನು ನೀಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -

ಈ ವೀಡಿಯೋವನ್ನು ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಇದು ಎಲ್ಲೆಡೆ ವೈರಲ್ ಆಗುತ್ತಿದೆ. ನೆಟ್ಟಿಗರು ಅಣ್ಣ-ತಂಗಿಯ ಪ್ರೀತಿ, ಬಾಂಧವ್ಯಕ್ಕೆ ಫಿದಾ ಆಗಿದ್ದಾರೆ.

ಪ್ರಿಯಾಂಕಾ ಗಾಂಧಿ  ಅವರು ಉತ್ತರ ಪ್ರದೇಶದಲ್ಲಿ “ಭಾರತ್ ಜೋಡೋ ಯಾತ್ರೆ”ಯಲ್ಲಿ ತಮ್ಮ ಸಹೋದರ ರಾಹುಲ್ ಗಾಂಧಿಯವರೊಂದಿಗೆ ಸೇರಿಕೊಂಡರು. ಬಳಿಕ ಭಾರತ್ ಜೋಡೋ ಯಾತ್ರೆ ವೇದಿಕೆಯಲ್ಲಿ ರಾಹುಲ್ ಗಾಂಧಿ ಅವರು ತಮ್ಮ ತಂಗಿಯ ಭುಜದ ಮೇಲೆ ಕೈಯಿಟ್ಟು  ತಮ್ಮ ಸಹೋದರಿ ಪ್ರಿಯಾಂಕಾ ಅವರನ್ನು ತಮ್ಮ ಹತ್ತಿರ ಎಳೆದುಕೊಂಡು, ಅಪ್ಪಿ ಅವರ ಕೆನ್ನೆಗಳಿಗೆ ಮುತ್ತಿಟ್ಟು ನಕ್ಕರು. ಈ ಪ್ರೀತಿಯ ಕ್ಷಣಗಳ ವೀಡಿಯೋ ಸಾಮಾಜಿಕ‌ ಜಾಲತಾಣಗಳಲ್ಲಿ‌ ವೈರಲ್‌ ಆಗಿದೆ.

Join Whatsapp