ಬೆಲೆ ಏರಿಕೆಗೆ ಕಣ್ಣೀರು ಹಾಕಿದ್ದ ವ್ಯಾಪಾರಿಗೆ ತಮ್ಮ ಮನೆಯಲ್ಲಿ ಔತಣ ಕೂಟ ನೀಡಿದ ರಾಹುಲ್ ಗಾಂಧಿ

Prasthutha|

ದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತರಕಾರಿ ವ್ಯಾಪಾರಿಯೊಬ್ಬರಿಗೆ ತಮ್ಮ ನಿವಾಸದಲ್ಲಿ ಆತಿಥ್ಯ ನೀಡಿರುವ ಬಗ್ಗೆ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ರಾಮೇಶ್ವರ್ ಎಂಬ ತರಕಾರಿ ವ್ಯಾಪಾರಿಯ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ರಾಹುಲ್ ಗಾಂಧಿ ಅವರು ಕೂಡ ಹಂಚಿಕೊಂಡಿದ್ದರು. ಟೊಮೆಟೊ ಬೆಲೆ ಗಗನಕ್ಕೇರಿದ ಸಮಯದಲ್ಲಿ ಟೊಮೆಟೋ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕಣ್ಣೀರು ಹಾಕುತ್ತಿದ್ದ ವಿಡಿಯೋ ಎಲ್ಲ ಕಡೆ ವೈರಲ್ ಆಗಿತ್ತು.
ಜುಲೈನಲ್ಲಿ ಈ ವೀಡಿಯೋ ವೈರಲ್ ಆಗಿತ್ತು. ಟೊಮೆಟೊ ಬೆಲೆ ಗಗನಕ್ಕೇರುತ್ತಿರುವ ಕುರಿತು ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನಾನು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಬೇಕು ಎಂದು ಆಸೆ ವ್ಯಕ್ತಪಡಿಸಿದ್ದರು. ಇದೀಗ ರಾಹುಲ್ ಗಾಂಧಿ, ರಾಮೇಶ್ವರ ಅವರನ್ನು ಭೇಟಿಯಾಗಿರುವ ಫೋಟೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ರಾಮೇಶ್ವರ ಒಬ್ಬ ಮುಗ್ದ ಮನಸ್ಸಿನ ವ್ಯಕ್ತಿ, ದೇಶದಲ್ಲಿ ಅದೆಷ್ಟೋ ಇಂತಹ ಉತ್ಸಾಹಭರಿತ ವ್ಯಕ್ತಿಗಳು ಇದ್ದರೆ. ಇಂತಹ ವ್ಯಕ್ತಿಗಳು ಭಾರತದ ಭಾಗ್ಯ ವಿಧಾತಾ ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

Join Whatsapp