ಜೈಪುರ: ರಾಜಸ್ಥಾನದಲ್ಲಿ ಮತ್ತೆ ಅಧಿಕಾರಕ್ಕೆ ಮರಳಲು ಪ್ಲಾನ್ ಹಾಕಿರುವ ಸಿಎಂ ಅಶೋಕ್ ಗೆಹ್ಲೋಟ್ ಅದಕ್ಕಾಗಿ ಭರ್ಜರಿ ಕಾರ್ಯತಂತ್ರವನ್ನು ರೂಪಿಸುತ್ತಿದ್ದಾರೆ.
ಇದಕ್ಕಾಗಿ ಅವರು ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡುತ್ತಿದ್ದಾರೆ. ಜೈಪುರದ ಬಿರ್ಲಾ ಆಡಿಟೋರಿಯಂನಲ್ಲಿ ಇಂದು ಸ್ಮಾರ್ಟ್ ಫೋನ್ ಯೋಜನೆಗೆ ಚಾಲನೆ ನೀಡಲಿದ್ದಾರೆ
ಯೋಜನೆಗೆ ಚಾಲನೆ ಸಿಗುವ ಮುನ್ನವೇ ಕಾಂಗ್ರೆಸ್ ನೇತಾರ, ರಾಹುಲ್ ಗಾಂಧಿ ನಿನ್ನೆ ಮಂಗರ್ ನಲ್ಲಿ ವಿದ್ಯಾರ್ಥಿನಿಯೊಬ್ಬರಿಗೆ ಸ್ಮಾರ್ಟ್ ಫೋನ್ ಹಸ್ತಾಂತರಿಸುವ ಮೂಲಕ ಯೋಜನೆಗೆ ಚಾಲನೆ ಕೊಟ್ಟಿದ್ದಾರೆ. ಮೊದಲ ಸುತ್ತಿನಲ್ಲಿ ಚಿರಂಜೀವಿ ಕುಟುಂಬದ ಮಹಿಳಾ ಮುಖ್ಯಸ್ಥರು ಸ್ಮಾರ್ಟ್ ಫೋನ್ ಗಳನ್ನು ಪಡೆಯಲಿದ್ದಾರೆ. ಸ್ಮಾರ್ಟ್ ಫೋನ್ ಯೋಜನೆ ಅಡಿ ರಾಜ್ಯದ 40 ಲಕ್ಷ ಮಹಿಳೆಯರು ಮತ್ತು ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್ ಪಡೆಯಲಿದ್ದಾರೆ. ಅಷ್ಟೇ ಅಲ್ಲ ಇವತ್ತೇ ‘ಡಿಜಿಟಲ್ ಸಖಿ ಪುಸ್ತಕ’ವನ್ನ ಬಿಡುಗಡೆ ಆಗಲಿದೆ.