ನೀವು ಯಾಕೆ ಮದುವೆ ಆಗಿಲ್ಲ?: ವಿದ್ಯಾರ್ಥಿನಿಯರ ಪ್ರಶ್ನೆಗೆ ರಾಹುಲ್ ಗಾಂಧಿ ಹೇಳಿದಿಷ್ಟು…

Prasthutha|

ಚರ್ಮದ ಆರೈಕೆ ಹೇಗೆ ಮಾಡುತ್ತೀರಿ? ನಿಮ್ಮ ನೆಚ್ಚಿನ ಆಹಾರ ಯಾವುದು: ವಿದ್ಯಾರ್ಥಿನಿಯರ ಪ್ರಶ್ನೆ

- Advertisement -

ನವದೆಹಲಿ: ಜೈಪುರದಲ್ಲಿ ಕಾಲೇಜು ವಿದ್ಯಾರ್ಥಿನಿಯರ ಜತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂವಾದ ನಡೆಸಿದ್ದು, ಈ ವೇಳೆ ಅವರಲ್ಲಿ ಹಲವಾರು ಪ್ರಶ್ನೆಗಳನ್ನು ವಿದ್ಯಾರ್ಥಿಗಳ ಕೇಳಿದ್ದಾರೆ.

ನೀನು ತುಂಬಾ ಸ್ಮಾರ್ಟ್ ಮತ್ತು ಲುಕ್ ಚೆನ್ನಾಗಿದೆ. ಮದುವೆಯ ಬಗ್ಗೆ ಏಕೆ ಯೋಚಿಸಲಿಲ್ಲ?” ಎಂದು ಮಾಜಿ ಕಾಂಗ್ರೆಸ್ ಅಧ್ಯಕ್ಷರಲ್ಲಿ ವಿದ್ಯಾರ್ಥಿನಿ ಕೇಳಿದ್ದಾರೆ. ಇದಕ್ಕೆ ರಾಹುಲ್,ನಾನು ನನ್ನ ಕೆಲಸದಲ್ಲಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ಕಾರಣ ಎಂದು ಉತ್ತರಿಸಿದ್ದಾರೆ.

- Advertisement -

ನಿಮ್ಮ ನೆಚ್ಚಿನ ತಿನಿಸು ಯಾವುದು ಎಂದು ಕೇಳಿದಾಗ ಹಾಗಲಕಾಯಿ, ಬಟಾಣಿ ಮತ್ತು ಪಾಲಕ್ ಹೊರತುಪಡಿಸಿ ಎಲ್ಲವನ್ನೂ ಚೆನ್ನಾಗಿ ತಿನ್ನುತ್ತೇನೆ ಎಂದಿದ್ದಾರೆ ರಾಹುಲ್. ನಿಮ್ಮ ನೆಚ್ಚಿನ ತಾಣ ಯಾವುದು ಎಂದು ಕೇಳಿದಾಗ ನಾನು ನೋಡದೇ ಇರುವ ಜಾಗ. ನಾನು ಯಾವಾಗಲೂ ಹೊಸ ಸ್ಥಳಗಳನ್ನು ನೋಡಲು ಇಷ್ಟಪಡುತ್ತೇನೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ನಿಮ್ಮ ಸುಂದರ ತ್ವಚೆಯ ರಹಸ್ಯ ಏನು ಎಂದು ಕೇಳಿದಾಗ, ನಾನು ಮುಖಕ್ಕೆ ಸೋಪ್ ಅಥವಾ ಕ್ರೀಮ್ ಹಚ್ಚುವುದಿಲ್ಲ, ಬರೀ ನೀರಿನಿಂದ ಮಾತ್ರ ತೊಳೆಯುತ್ತೇನೆ ಎಂದು ಹೇಳಿದ್ದಾರೆ.