ಸಂಪುಟ ಪುನರ್‌ರಚನೆ| ಇನ್ನು ಮುಂದೆ ಲಸಿಕೆ ಕೊರತೆ ಇರುವುದಿಲ್ಲವೇ?: ರಾಹುಲ್ ಗಾಂಧಿ

Prasthutha|

ನವದೆಹಲಿ: ಕೇಂದ್ರ ಸರ್ಕಾರದಲ್ಲಿ ನೂತನ ಆರೋಗ್ಯ ಸಚಿವರು ಅಧಿಕಾರ ಸ್ವೀಕರಿಸಿದ ಕುರಿತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದು, ಏನಾದರೂ ಬದಲಾವಣೆ ಆಗುತ್ತದೆಯೇ? ಇನ್ನು ಮುಂದೆ ಲಸಿಕೆ ಕೊರತೆ ಇರುವುದಿಲ್ಲವೇ? ಎಂದು ಟ್ವೀಟ್ ಮಾಡಿದ್ದಾರೆ.

- Advertisement -

“#Change” ಎಂಬ ಹ್ಯಾಶ್ ಟ್ಯಾಗ್ ಬಳಸಿರುವ ರಾಹುಲ್ ಗಾಂಧಿ,  ಇನ್ನು ಮುಂದೆ ಲಸಿಕೆ ಕೊರತೆ ಇರುವುದಿಲ್ಲವೇ?ಎಂದು ಪ್ರಶ್ನಿಸಿದ್ದಾರೆ.

ದೇಶದ ಲಸಿಕಾ ಅಭಿಮಾನವು ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿದೆ ಮತ್ತು ಅದಕ್ಕೆ ವೇಗ ನೀಡಬೇಕಿದೆ ಎಂದು ಕಾಂಗ್ರೆಸ್ ಪಕ್ಷವು ಆರೋಪಿಸುತ್ತಲೇ ಇದೆ.

- Advertisement -

ಆರೋಗ್ಯ ಸಚಿವರಾಗಿದ್ದ ಹರ್ಷವರ್ಧನ್ ಅವರನ್ನು ಕೈಬಿಡುವ ಮೂಲಕ ಕೇಂದ್ರ ಸರ್ಕಾರವು ಕೊರೊನಾ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂಬುದನ್ನು ಒಪ್ಪಿಕೊಂಡಂತಾಗಿದೆ ಎಂದು ಕಾಂಗ್ರೆಸ್ ಈ ಹಿಂದೆ ಟೀಕಿಸಿತ್ತು.



Join Whatsapp