ರೈತರ ಪ್ರತಿಭಟನೆ ತೆರವುಗೊಳಿಸಲು ಹಿಂಸೆಗೆ ಕರೆ ನೀಡಿದ ರಾಗಿಣಿ ತಿವಾರಿ

Prasthutha|

ನವದೆಹಲಿ : ಕಳೆದ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಮುಸ್ಲಿಂ ವಿರೋಧಿ ಗಲಭೆಗೆ ತಾನೇ ಕಾರಣಳೆಂದು ಒಪ್ಪಿಕೊಂಡ ಉಗ್ರವಾದಿ ರಾಗಿಣಿ ತಿವಾರಿ, ಡಿ.16ರೊಳಗೆ ಪ್ರತಿಭಟನೆ ನಿರತ ರೈತರನ್ನು ತೆರವುಗೊಳಿಸದಿದ್ದರೆ, ಮತ್ತೊಂದು ಗಲಭೆ ನಡೆಸುವುದಾಗಿ ಬೆದರಿಕೆಯೊಡ್ಡಿದ್ದಾಳೆ.

- Advertisement -

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ತಿವಾರಿಯ ವೀಡಿಯೊವೊಂದರಲ್ಲಿ, ಡಿ.16ರೊಳಗೆ ರೈತರ ಪ್ರತಿಭಟನೆ ನಿಲ್ಲದಿದ್ದರೆ ಮತ್ತೊಂದು ಝಫ್ರಾಬಾದ್ ಸೃಷ್ಟಿಸುವುದಾಗಿ ಬೆದರಿಕೆಯೊಡ್ಡಿದ್ದಾಳೆ. ಝಫ್ರಾಬಾದ್ ಫೆಬ್ರವರಿಯಲ್ಲಿ ಹಿಂಸಾಚಾರ ನಡೆದ ದೆಹಲಿಯ ಒಂದು ಪ್ರದೇಶ. ಈ ಗಲಭೆಯಲ್ಲಿ 50ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು.

ತಿವಾರಿ ದೆಹಲಿ ಗಲಭೆ ವೇಳೆ ಪೊಲೀಸರ ಸಮ್ಮುಖದಲ್ಲೇ ಹಿಂಸೆಗೆ ಪ್ರಚೋದಿಸುತ್ತಿದ್ದ ವೀಡಿಯೊ ವೈರಲ್ ಆಗಿತ್ತು. ಫೆಬ್ರವರಿ ಗಲಭೆಗೂ ಮುನ್ನಾ ಆಕೆ ಹಲವು ಪ್ರಚೋದನಕಾರಿ ಭಾಷಣ ಮಾಡಿದ್ದಳು. ಆದರೂ, ಆಕೆಯ ವಿರುದ್ಧ ಯಾವುದೇ ಕ್ರಮಕೈಗೊಂಡಿರಲಿಲ್ಲ.

- Advertisement -

ಇದೀಗ ತಿವಾರಿ ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ಪ್ರತಿಭಟನೆಗಿಳಿದಿರುವ ರೈತರ ವಿರುದ್ಧ ತಿರುಗಿಬಿದ್ದಿದ್ದಾಳೆ. ಯಾವುದೇ ಅಹಿತಕರ ಘಟನೆಗಳು ನಡೆದರೆ ಕೇಂದ್ರ ಮತ್ತು ರಾಜ್ಯ ಸರಕಾರ ಹೊಣೆ ಎಂದು ಆಕೆ ಹೇಳಿದ್ದಾಳೆ.

ತಿವಾರಿಯ ಈ ಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಆಕ್ಷೇಪ ವ್ಯಕ್ತವಾಗಿದೆ. ಆಕೆಯ ವಿರುದ್ಧ ಕ್ರಮ ಕೈಗೊಳ್ಳದ ಸರಕಾರಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಎರಡು ವೀಡಿಯೊಗಳಿವೆ, ಒಂದರಲ್ಲಿ ಶರ್ಜೀಲ್ ರಸ್ತೆ ತಡೆ (ಪ್ರಜಾಸತ್ತಾತ್ಮಕ ವಿಧಾನ) ಪ್ರತಿಭಟನೆ ಬಗ್ಗೆ ಮಾತನಾಡಿದ್ದಕ್ಕೆ ಅವರ ವಿರುದ್ಧ ಯುಎಪಿಎಯಡಿ ಕೇಸ್ ದಾಖಲಿಸಿ, ಬಂಧಿಸಲಾಗಿದೆ. ಇದೀಗ ರಾಗಿಣಿ ತಿವಾರಿ ದೆಹಲಿ ಗಲಭೆಯಲ್ಲಿ ತನ್ನ ಪಾತ್ರದ ಬಗ್ಗೆ ಬಹಿರಂಗವಾಗಿ ಒಪ್ಪಿಕೊಂಡಿದ್ದಾಳೆ ಮತ್ತು ಅದೇ ರೀತಿಯ ಬೆದರಿಕೆ ರೈತರ ವಿಷಯದಲ್ಲೂ ಒಡ್ಡಿದ್ದಾಳೆ. ಆಕೆಯ ವಿರುದ್ಧ ಎಫ್ ಐಆರ್ ಇಲ್ಲ, ಬಂಧನವೂ ಇಲ್ಲ, ತನಿಖೆಯೂ ಇಲ್ಲ ಎಂದು ಪತ್ರಕರ್ತ ಪ್ರಶಾಂತ್ ಕನೋಜಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

https://twitter.com/NabiyaKhan11/status/1337807554311647233
Join Whatsapp