ಕುಕ್ಕರ್, ಟಿವಿ, ಮನೆ ವಸ್ತುಗಳ ನಂತರ ಇದೀಗ ಛತ್ರಿ ರಾಜಕಾರಣ

Prasthutha|


ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳು ನಾನಾ ರೀತಿಯ ವಸ್ತುಗಳನ್ನು ಮತದಾರರಿಗೆ ಹಂಚುವುದು ಮುಂದುವರೆದಿದ್ದು, ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ರಘುವೀರ್ ಎಸ್. ಗೌಡ ದೊಡ್ಡ ಛತ್ರಿಗಳನ್ನು ವಿತರಿಸಿದ್ದಾರೆ.
ತಮ್ಮ ಭಾವಚಿತ್ರವಿರುವ ಛತ್ರಿಗಳನ್ನು ವಿತರಿಸಿದ್ದಾರೆ.

- Advertisement -


ಬೇಸಿಗೆಯ ಉರಿ ಬಿಸಿಲಿನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರ ವಹಿವಾಟು ನಡೆಸಲು ಸೂಕ್ತವಾಗಿರುವ ದೊಡ್ಡ ಗಾತ್ರದ ಛತ್ರಿಗಳನ್ನು ರಘುವೀರ್ ಗೌಡ ಚಾರಿಟೇಬಲ್ ಟ್ರಸ್ಟ್ ನಿಂದ ವಿತರಿಸಲಾಯಿತು.
ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಮಂಜುಳ ವಿಜಯಕುಮಾರ್, ಹೆಚ್.ವಿಜಯಕುಮಾರ್, ಕಾಂಗ್ರೆಸ್ ಮುಖಂಡರಾದ ರಾಕೇಶ್, ಚಂದ್ರ ಮತ್ತಿತರರು ಕ್ಷೇತ್ರದ ವಿವಿಧ ಭಾಗಗಳಲ್ಲಿ ಛತ್ರಿಗಳನ್ನು ವಿತರಣೆ ಮಾಡಿದರು.


ಈ ಸಂದರ್ಭದಲ್ಲಿ ರಘುವೀರ್ ಎಸ್.ಗೌಡ ಮಾತನಾಡಿ, ದುಡಿಯುವ ಕೈಗಳಿಗೆ ಎಂದೂ ನೋವಾಗಬಾರದು. ಶ್ರಮಿಕ ವರ್ಗ ನಮ್ಮ ದೇಶದ ಸಂಪತ್ತು. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬಂತೆ ಪ್ರತಿಯೊಬ್ಬರಿಗೂ ಶಿಕ್ಷಣ, ಆರೋಗ್ಯ ಉದ್ಯೋಗ ಮತ್ತು ಆರ್ಥಿಕ ಸಮಾನತೆ ಸಿಗಬೇಕು. ಸಮಾಜದಲ್ಲಿ ಶ್ರೀಮಂತರಂತೆ ಬಡವರಿಗೂ ಉತ್ತಮ ಜೀವನ ಸಾಗಿಸಲು ಆರ್ಥಿಕವಾಗಿ ಸಹಕಾರ, ಸಹಾಯ ಮಾಡುವುದು ಮಾನವನ ಧರ್ಮ ಎಂದರು.

Join Whatsapp