ಆಕೆಯ ಶೈಕ್ಷಣಿಕ ಜೀವನಕ್ಕೆ ಶುಭವಾಗಲಿ: ಅಲಿಯಾ ಅಸ್ಸಾದಿಗೆ ಶುಭ ಕೋರಿದ ರಘುಪತಿ ಭಟ್

Prasthutha|

ಉಡುಪಿ : ಹಿಂದೆ ಉಡುಪಿಯಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದ ಹಿಜಾಬ್ ಪ್ರಕರಣವನ್ನು ಸಮವಸ್ತ್ರ ಆಧಾರಿತವಾಗಿ ನಾನು ನೋಡಿದ್ದೇನೆಯೇ ಹೊರತು, ಧರ್ಮಾಧಾರಿತವಾಗಿ ನೋಡಿಲ್ಲ ಎಂದು ಮಾಜಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.

- Advertisement -

ಆ ಮೂಲಕ, ಹಿಜಾಬ್ ಹೋರಾಟಗಾರ್ತಿ ಅಲಿಯಾ ಅಸ್ಸಾದಿ ಟ್ವೀಟಿಗೆ (ಎಕ್ಸ್) ಪ್ರತಿಕ್ರಿಯೆ ನೀಡಿದ್ದಾರೆ.

ಹಿಜಾಬ್ ಅನ್ನು ನಾನು ಸಮವಸ್ತ್ರದ ರೀತಿಯಲ್ಲಿ ನೋಡಿದ್ದೆ, ನಾನು ಶಾಸಕನಾಗುವ ಮುನ್ನ ಆ ಶಾಲೆಯಲ್ಲಿ ಸಮವಸ್ತ್ರ ಪದ್ದತಿ ಜಾರಿಯಲ್ಲಿತ್ತು. ಹಾಗಾಗಿ, ಅದು ಹೋರಾಟಕ್ಕೆ ಕಾರಣವಾಯಿತೇ ವಿನಃ, ಧರ್ಮಾಧಾರಿತವಾಗಿ ನೋಡಿರಲಿಲ್ಲ ” ಎಂದು ಅಲಿಯಾ ಅಸ್ಸಾದಿ ಟ್ವೀಟಿಗೆ ಸ್ಪಷ್ಟನೆಯನ್ನು ನೀಡಿದ್ದಾರೆ.

- Advertisement -

ದೇವನು ತಾನಿಚ್ಚಿಸಿದ್ದನ್ನು ಮಾಡಿಯೇ ತೀರುವನು. ವಾರ್ಷಿಕ ಪರೀಕ್ಷೆಗೆ ಇನ್ನೇನು 60 ದಿನಗಳಿರುವಾಗ ಹಿಜಾಬ್ ಧರಿಸಿದ ಏಕಮಾತ್ರ ಕಾರಣಕ್ಕೆ ನನ್ನನ್ನು ಕಾಲೇಜಿನಿಂದ ಹೊರದಬ್ಬಿ ನಿಮ್ಮ ಪಕ್ಷಕ್ಕೆ ದೊಡ್ಡ ಸಾಧನೆ ಮಾಡಿ ತೋರಿಸಿದರಲ್ಲವೇ, ಆದರೆ ಇಂದು ಅದೇ ಪಕ್ಷ ನಿಮ್ಮನ್ನು ಹೊರದಬ್ಬುವ ಆ ಕ್ಷಣವನ್ನು ನಾನು ನನ್ನ ಉಡುಪಿಯಲ್ಲೇ ನೋಡುವಂತಾಯಿತು”.

ಅಂದು ನಾನು ಉಚ್ಚಾಟಿತ ವಿದ್ಯಾರ್ಥಿ, ನಿಮಗೆ ಪಕ್ಷದಲ್ಲಿ ಪದವಿ. ಇಂದು ನಾನು ವಕೀಲೆ ಪದವಿ ವಿದ್ಯಾರ್ಥಿ, ನೀವು ಉಚ್ಚಾಟಿತ ವ್ಯಕ್ತಿ ಎಂದು ಹಿಜಾಬ್ ಹೋರಾಟಗಾರ್ತಿ ಅಲಿಯಾ ಅಸ್ಸಾದಿ ಟ್ವೀಟ್ ಮಾಡಿದ್ದರು.



Join Whatsapp