ರಘುಧೀಕ್ಷಿತ್ ಅವರ “ರಿದಂ ನೈಟ್” ಸಂಗೀತ ಕಾರ್ಯಕ್ರಮ ವಂಡರ್’ಲಾದಲ್ಲಿ ಆಯೋಜನೆ

Prasthutha|

ಬೆಂಗಳೂರು: ಸಂಗೀತ ಪ್ರಿಯರಿಗಾಗಿ ವಂಡರ್‌ಲಾ ವತಿಯಿಂದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ರಘು ದೀಕ್ಷಿತ್ ಅವರ ಸಂಗೀತ ಕಾರ್ಯಕ್ರಮವನ್ನು ಜೂ.4ರ ಸಂಜೆ 7.30ಕ್ಕೆ ವಂಡರ್ ಲಾ ಪಾರ್ಕ್‌ನಲ್ಲಿ ಆಯೋಜಿಸಲಾಗಿದೆ.

- Advertisement -


“ರಿದಂ ನೈಟ್” ಶೀರ್ಷಿಕೆಯ ಸಂಗೀತ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ಗಾಯಕ ರಘುದೀಕ್ಷಿತ ಫೋಕ್ ರಾಕ್ ಫ್ಯೂಷನ್ ಸಂಗೀತ ಪ್ರದರ್ಶಿಸಲಿದ್ದಾರೆ. ಇದರ ಜೊತೆಗೆ ಆಹಾರ ಮತ್ತು ಪಾನೀಯಗಳ ಕೌಂಟರ್‌ಗಳು ಇರಲಿವೆ. ಸಂಗೀತಾಸಕ್ತರು ಸಂಗೀತ ರಸದೌತಣವನ್ನು ಸವಿಯಬಹುದು.

ಟಿಕೆಟ್ ಬುಕ್ಕಿಂಗ್‌ಗಾಗಿ https://apps.wonderla.co.in/rhydmnightblr ವೆಬ್‌ಸೈಟ್‌ಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ https://www.wonderla.com/offers/rhydm-night-at-wonderla-bengaluru.html ಭೇಟಿ ಮಾಡಬಹುದು. ಅಥವಾ 080 080 37230333, 080 35073966 ಈ ಸಂಖ್ಯೆಗೆ ಕರೆ ಮಾಡಬಹುದು.

Join Whatsapp